Sunday, February 12, 2012

ಓಂ ಸ್ವಾಮಿಯೇ ಶರಣಂ ಅಯ್ಯಪ್ಪ... om swaamiye saranam ayyappa....




 

ಈಗ್ಗೆ ಐದು ವರ್ಷದಿಂದ ಶಬರಿಮಲೆಗೆ ಹೋಗಿ ಬರುತ್ತಿದ್ದೇನೆ ಆದರೆ ಪ್ರತಿಸಲದ  ಯಾತ್ರೆಯೂ ಮೊದಲಸಲ ಹೋದ ಅನುಭವ ,ಆನಂದ ನೀಡುತ್ತಿದೆ.
ಬೆಂಗಳೂರಿನಿಂದ ಪಾದಯಾತ್ರೆ ಹೋಗುವ ಮನಸ್ಸಿತ್ತು ಕಾರಣಾಂತರದಿಂದ ಸಾಧ್ಯವಾಗಲಿಲ್ಲ ,ಬದಲಿಗೆ ತೆನ್ ಕಾಶಿಯಿಂದ ಹೋಗುವುದು ನಿರ್ಧಾರವಾಗಿತ್ತು.
 ನಾವು ನಡೆದು ಹೋದ ಹಾದಿಯ ವಿವರ ಹೀಗಿದೆ.
೧. ಡಿಸೆಂಬರ್ ಮೂವತ್ತೊಂದು :   ಬೆಂಗಳೂರಿನಿಂದ ತೂತ್ತುಕುಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮದುರೈಗೆ ಪ್ರಯಾಣ.
೨. ಜನವರಿ ಒಂದು:  ಮದುರೈ ಮೀನಾಕ್ಷಿ-ಸುಂದರೇಶ್ವರ ದರ್ಶನ . ಅಲ್ಲಿಂದ ಮತ್ತೊಂದು ರೈಲು ಹಿಡಿದು Sengottai ಗೆ ಪ್ರಯಾಣ ಅಲ್ಲಿಂದ ಕೇರಳ ಸರಹದ್ದು ಕಾಡಿನಲ್ಲಿರುವ  'ಅಚ್ಚನ್ ಕೊವಿಲ್ಅಯ್ಯಪ್ಪನ ದರ್ಶನ ಮಾಡಿ ರಾತ್ರಿ ತೆನ್ ಕಾಶಿ ಯಲ್ಲಿ ವಿಶ್ರಾಂತಿ.
೩. ಜನವರಿ ಎರಡು:  ಪಾದಯಾತ್ರೆಯ ಮೊದಲದಿನ ತೆನ್ ಕಾಶಿಯಿಂದ ಪ್ರಾರಂಭ , ಹಾದಿಯಲ್ಲಿ ಕುಟ್ರಾಲಂ ಶಿವನ ದರ್ಶನ , ಇಳಂಜಿ ಸುಬ್ರಮಣ್ಯ ನಂತರ ಪುಳಿಯಾರಿ ದಕ್ಷಿಣಾಮೂರ್ತಿ ದೇವ ಸ್ಥಾನ ದಲ್ಲಿ ಊಟ , ವಿಶ್ರಾಂತಿ ಸಂಜೆ ದೇವರದರ್ಶನ ಮಾಡಿ ರಾತ್ರಿ ಏಳೂ ಮೂವತ್ತಕ್ಕೆ ಕೇರಳದ 'ಆರ್ಯನ್ ಕಾವು ' ಅಯ್ಯಪ್ಪನ ದರ್ಶನ ಮಾಡಿ ತಂಗಿದ್ದು ಪಿ.ಡಬ್ಲ್ಯು.ಡಿ. ಗೆಸ್ಟ್ ಹೌಸ್ ನಲ್ಲಿ. ಮೊದಲ ದಿನ ನಡೆದಿದ್ದು ಮೂವತ್ತು ಕಿ.ಮೀ.
೪.ಜನವರಿ ಮೂರು: 'ಆರ್ಯನ್ ಕಾವು' ನಿಂದ ಹೊರಟು 'ತೆನ್ ಮಲಾ' ನಲ್ಲಿ  ವಿಶ್ರಾಂತಿ ,ಅಲ್ಲಿ ನಾವೇ ಅಡುಗೆ ಮಾಡಿ ತಿಂದು ಮುಂದೆ  'ಕುಳತ್ತೂರ್ ಪುಳಾ ' ಸೇರಿದಾಗ ರಾತ್ರಿ ಏಳೂವರೆ ,ಅಲ್ಲಿ ಅಯ್ಯಪ್ಪನ ದರ್ಶನಮಾಡಿ ಅಲ್ಲೇ ದೇವ ಸ್ಥಾನದ  ಪ್ರಾಕಾರದ ಪಕ್ಕದಲ್ಲಿ ವಿಶ್ರಾಂತಿ. ಎರಡನೆದಿನ ನಡೆದಿದ್ದು ಇಪ್ಪತೆಂಟು ಕಿ.ಮೀ.
೫. ಜನವರಿ ನಾಲ್ಕು : 'ಕುಳತ್ತೂರ್ ಪುಳಾ ' ನಿಂದ ಹೊರಟಾಗ ಬೆಳಗ್ಗೆ ಐದೂವರೆ ,  ಹನ್ನೆರಡು ಗಂಟೆಯ ಹೊತ್ತಿಗೆ ತಲುಪಿದ್ದು 'ಅಗಸ್ತ್ಯ ಕೋಡು ' ದೇವ ಸ್ಥಾನ. ಹೊಳೆಯಲ್ಲಿ ಮಿಂದು ,ಅಲ್ಲಿ ಕೊಟ್ಟ ಸಿಹಿ ಪೊಂಗಲ್ ಸೇವಿಸಿ , ವಿಶ್ರಮಿಸಿಕೊಂಡು 'ಪುನಲೂರು' ತಲುಪಿದಾಗ ಸಂಜೆ ನಾಲ್ಕೂ ಮೂವತ್ತು. ಆದಿನ ನಡೆದಿದ್ದು ಮೂವತ್ತಮೂರು  ಕಿ.ಮೀ.
೬. ಜನವರಿ ಐದು:  ಮುಂದಿನ ಪ್ರಯಾಣ 'ಕೋನ್ನಿ'.  ಮಾರ್ಗ: ಪುನಲೂರು-ಪಟ್ಟಣಪುರ-ಕೂಡಲ್ -ಕೋನ್ನಿ.
ಮಾರ್ಗಮಧ್ಯದಲ್ಲಿ 'ಕೂಡಲ್ ದುರ್ಗಾ ದೇವಿ ' ದೇವ ಸ್ಥಾನ ದಲ್ಲಿ ವಿಶ್ರಾಂತಿ. ರಾತ್ರಿ ತಂಗಿದ್ದು ಕೋನ್ನಿಯ ಶಿವನ ದೇವಸ್ಥಾನದ ಹತ್ತಿರ ಒಂದು ಸಣ್ಣ ಛತ್ರ ದಲ್ಲಿ.   ನಾಲ್ಕನೇ ದಿನ ಇಪ್ಪತ್ತು ಕಿ.ಮೀ.
೭. ಜನವರಿ ಆರು : ಬೆಳಗ್ಗೆ ಆರು ಗಂಟೆಗೆ ಕೋನ್ನಿ ಯಿಂದ ಕುಂಬಳ ತಲುಪಿದ್ದು   ಶಬರಿಯಂತೆ ದಾರಿಕಾಯುತ್ತಿದ್ದ ಒಬ್ಬ ಹಿರೀ ಹೆಣ್ಣುಮಗಳ ಮನೆಗೆ. ಅಲ್ಲಿ ಸ್ನಾನ , ಭಜನೆ ,ಪಲಾಹಾರ ಮುಗಿಸಿ ಅವರ ಮನೆಯಲ್ಲಿ ವಿಶ್ರಾಂತಿ ಪಡೆದು ಮೂರುಗಂಟೆಗೆ ಅವರ ಮನೆಯಿಂದ ಹೊರಟು 'ರಾನ್ನಿ' ತಲುಪಿದಾಗ ರಾತ್ರಿ ಸುಮಾರು ಎಂಟುಗಂಟೆ . 
ಆದಿನ ನಡೆದಿದ್ದು ಹದಿನಾರು ಕಿ.ಮೀ


(ಕುಂಬಳ ದಲ್ಲಿ  ನಾವು ತಂಗಬೇಕಿದ್ದ ಮನೆ ತಲುಪಿದಾಗ ಮನೆಯೊಡತಿಗೆ ಆದ ಸಂಬ್ರಮ ಹೇಗಿತ್ತೆಂದರೆ ಸುಮಾರು ವರ್ಷದಿಂದ ನೋಡದಿದ್ದ ತುಂಬಾ  ಹತ್ತಿರದ ಬಂಧುಗಳು ಮನೆಗೆ ಬಂದಾಗ ಆಗುವ ಸಂತೋಷ.
ನಮ್ಮನ್ನು ಸತ್ಕರಿಸಿದ ಬಗೆ ವಿವರಿಸಲು ಸಾಧ್ಯವೇ ಇಲ್ಲ.ಹೋದ ತಕ್ಷಣ 'ಇರುಮುಡಿಯನ್ನು' ಪೂಜಾ ಮನೆಯಲ್ಲಿ ಇರಿಸಿ ,ಭಜನೆ ಮಾಡಲು ಅನುವು ಮಾಡಿಕೊಟ್ಟು ,ಭಜನೆ ಮುಗಿಯುವ ಹೊತ್ತಿಗೆ ಉಪಹಾರಕ್ಕೆ ಉಪ್ಪಿಟ್ಟು , ಕೇರಳದ ವಿಶೇಷ ತಿನಿಸಾದ 'ಪುಟ್ಟು' ಜೊತೆಗೆ ಚಪ್ಪರಿಸಲು ಸಕ್ಕರೆ , ಹಬೆಯಲ್ಲಿ ಬೆಂದ ನೇಂದ್ರಬಾಳೆಹಣ್ಣು ,ಹೆಸರುಕಾಳಿನ ಪಲ್ಯ , ಕುಡಿಯಲು ಗಿಡಮೂಲಿಕೆಗಳಿಂದ ಮಾಡಿದ ಬಿಸಿ ನೀರು.ತಿಂಡಿ ಮುಗಿಸಿ ಬಟ್ಟೆಗಳನ್ನು ಒಗೆದು ಬಿಸಿಲಿಗೆ ಹಾಕಿ ,ಸಾಕಷ್ಟು ನಿದ್ರೆ ಮಾಡಿ ,ಹೊರಡುವ ಮುನ್ನ ರಾತ್ರಿಗೆ ತಿನ್ನಲು ಬುತ್ತಿ ಪಡೆದು ಬಿಸಿಬಿಸಿ ಹಾಲು ಕುಡಿದು ಅಲ್ಲಿಂದ ಮನಸ್ಸಿಗೆ ಏನೋ ಹೇಳಲಾಗದಂತಾ ಆನಂದದಿಂದ ಹೊರಟು ಸ್ವಲ್ಪ ದೂರ ನಡೆದಮೇಲೆ ಗೊತ್ತಾಯಿತು ಆ ಮನೆಯಲ್ಲಿ ಹದಿನಾರು ದಿನಗಳ ಹಿಂದೆ ಆ ಹಿರೀ ಹೆಣ್ಣುಮಗಳ ಪತಿ ಅಸುನೀಗಿದ್ದರು.
    
ನಾವು ಅವರ ಮನೆಗೆ ಹೋದ ಸಮಯಕ್ಕೆ ಸುಮಾರು ಹದಿನಾಲ್ಕು ವರ್ಷ ವಯಸ್ಸಿನ ಒಂದು ಹೆಣ್ಣು ಮಗು ಶಾಲೆಗೆ ಹೊರಟಿತ್ತು. ಆ ಮಗು ಒಂದೂವರೆ ವರ್ಷವಾಗಿದ್ದಾಗ ಅದರ ಅಪ್ಪ ಅಂದರೆ ಆ ಮನೆಯ ಅಳಿಯ ಕಾಲವಾಗಿದ್ದರು ಈಗ ಆ ಮನೆಯ ಒಡೆಯ. ಈ ವಿಷಯವನ್ನು ಕೇಳಿದಾಗ ನಮಗಾದ ಸಂಕಟ ನಮಗಷ್ಟೇ ಗೊತ್ತು.
      ಸುಮಾರು ವರ್ಷದಿಂದ ಪಾದಯಾತ್ರೆ ಹೋಗುವವರನ್ನು ಆ ದಂಪತಿಗಳು    ಸತ್ಕರಿಸುತ್ತಿದ್ದು , ಚನ್ನೈನ ನಮ್ಮಗುರುಸ್ವಾಮಿಯ ಅಣ್ಣನ ಮಗ ನಮ್ಮನ್ನು  ಅವರ ಮನೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದರು.ಅವರಿಗೂ ಸಹ  ಮನೆಯಾಕೆಯ ಪತಿ ನಿಧನ ವಾದ ಸುದ್ದಿ ತಿಳಿದಿರಲಿಲ್ಲ . ಬೆಂಗಳೂರಿನಿಂದ ಶಬರಿಮಲೆಗೆ ಹನ್ನೆರಡು ಜನ ಬರುತ್ತಿದ್ದಾರೆ ನಿಮ್ಮಮನೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಡಿ ಎಂದಾಗ ಮನೆಯ ಪರಿಸ್ಥಿತಿ ಹೀಗಿದೆ ಬೇಡಾ ಎನ್ನದೆ ಆಕೆ ಸಂತೋಷದಿಂದ ಒಪ್ಪಿಕೊಂಡಿದ್ದರು. ನಾವು ಹೋಗಿದ್ದು ,ಭಜನೆ ಮಾಡಿದ್ದು , ಅವರ ಆತಿಥ್ಯ ಸ್ವೀಕರಿಸಿದ್ದು ಅವರಿಗೆ ಮನಸ್ಸು ಹಗುರವಾಗುವಂತೆ ಮಾಡಿತ್ತು ಎಂಬುದು ನಂತರ ಚನ್ನೈನವರ ಮೂಲಕ ತಿಳಿಯಿತು. ಸೇವೆ ಎಂದರೆ ಹೀಗೂ ಇರುತ್ತೆ ಎಂಬುದು ಈ ಪಾದಯಾತ್ರೆಯ ಮೂಲಕ ನಮಗೆ ಮನವರಿಕೆಯಾಗಿತ್ತು.)

೮. ಜನವರಿ ಏಳು : ಪಾದಯಾತ್ರೆಯ ಮೊದಲ ಭಾಗದ ಕೊನೆಯ ದಿನ , ಬೆಳಗ್ಗೆ ನಾಲ್ಕೂ ನಲವತ್ತಕ್ಕೆ  'ರಾನ್ನಿ' ಇಂದ ಹೊರಟು ಎಂಟೂಮೂವತ್ತಕ್ಕೆ    'ಎರುಮೆಲಿ ' ತಲುಪಿ  ಬೆಂಗಳೂರಿನಿಂದ ನೇರ ಎರುಮೆಲಿಗೆ ಬರಬೇಕಿದ್ದ   ಇನ್ನೊಂದು ತಂಡವನ್ನು ಎದುರುಗೊಳ್ಳಲು ಕಾಯುತ್ತಿದ್ದೆವು.                  ರಾನ್ನಿ ಇಂದ  ಎರುಮೆಲಿ ಹದಿನಾರು ಕಿ.ಮೀ. 

ಸಂಜೆ ಐದೂ ಹದಿನೈದಕ್ಕೆ ಎರುಮೆಲಿ ಇಂದ 'ದೊಡ್ದಪಾದ ಶುರು, 'ಪೆರುರ್ ತೋಡು' ವಿನ ಹೊಳೆಯಲ್ಲಿ ಸಂಪ್ರದಾಯದಂತೆ ಮೀನಿಗೆ ಪುರಿ ಹಾಕಿ ನಾವೂ ಹೊಟ್ಟೆಗೆ ಅದಾರ ಮಾಡಿಕೊಂಡು ಕಾಡಿನ ಮಧ್ಯೆ ಇರುವ ಕಾಳಕಟ್ಟಿ ಆಶ್ರಮ ಸೇರಿದ್ದು ರಾತ್ರಿ ಹನ್ನೊಂದಕ್ಕೆ.ಅಲ್ಲೇ ತಂಗಿದ್ದೂ ಕೂಡ. ಎರುಮೆಲಿಯಿಂದ ಕಾಳಕಟ್ಟಿ ಆಶ್ರಮ ಹನ್ನೊಂದು ಕಿ.ಮೀ.   
                                      
೯. ಜನವರಿ ಎಂಟು: ಕಾಳಕಟ್ಟಿ ಆಶ್ರಮ ಬೆಳಗ್ಗೆ ಐದೂಮೂವತ್ತಕ್ಕೆ ಬಿಟ್ಟು 'ಅಳದಾ ನದಿಯಲ್ಲಿ ' ಸ್ನಾನ ಮಾಡಿ ನದಿಯಲ್ಲಿ ಒಂದು ಕಲ್ಲು ತೆಗೆದುಕೊಂಡು 'ಕಲ್ಲಿಡಂ ಕುಂಡ್ರು'ನಲ್ಲಿ ಹಾಕಿ ಮುಂದಿನ ವಿಶ್ರಾಂತಿ ಸ್ಥಳ 'ಕರಿವಲ್ಲಂ ತೋಡು' ಸೇರಿದಾಗ ಬೆಳಗ್ಗೆ ಹನ್ನೊಂದು ಗಂಟೆ.                             ಕಾಳಕಟ್ಟಿ ಆಶ್ರಮದಿಂದ ಕರಿಮಲೆ ತೋಡು ಹದಿನಾರು ಕಿ.ಮೀ.
೧೦. ಜನವರಿ  ಒಂಬತ್ತು :  ಬೆಳಗ್ಗೆ ಐದು ಗಂಟೆಗೆ 'ಕರಿವಲ್ಲಂ ತೋಡು' ಬಿಟ್ಟು 'ಕರಿಮಲೆ' ಹತ್ತಿ ಬೆಟ್ಟದ ತುದಿ ತಲುಪಿದಾಗ ಏಳೂವರೆ ಅಲ್ಲಿಂದ ಎಂಟೂ  ಇಪ್ಪತ್ತಕ್ಕೆ ಬೆಟ್ಟ ಇಳಿಯಲು ಪ್ರಾರಂಭಿಸಿ 'ಪಂಪ' ಸೇರಿದಾಗ ಒಂಬತ್ತು ಮುಕ್ಕಾಲು ಆದಿನ ಪಂಪ ನದಿಯಲ್ಲಿ ಮಿಂದು ಬಜನೆ ,ಅನ್ನಪ್ರಸಾದ ,ವಿಶ್ರಾಂತಿ.                                                  ಕರಿಮಲೆ ತೋಡುವಿನಿಂದ ಪಂಪ    ಹದಿನೆಂಟು ಕಿ.ಮೀ 
೧೧. ಜನವರಿ ಹತ್ತು : ಬೆಳಗ್ಗೆ ಎರಡೂ ಮೂವತ್ತಕ್ಕೆ ಪಂಪ ದಿಂದ ಹೊರಟು 'ನೀಲಿಮಲೆ ' ಹತ್ತಿ , ಶಬರಿ ಪೀಠ , ಶರಣಗುತ್ತಿ ಮೂಲಕ ಸನ್ನಿಧಾನಕ್ಕೆ ತಲುಪಿ ಪವಿತ್ರವಾದ 'ಹದಿನೆಂಟು ಮೆಟ್ಟಿಲು'ಹತ್ತಿದಾಗ ಬೆಳಗ್ಗೆ ನಾಲ್ಕೂ ಇಪ್ಪತ್ತು , ಸ್ವಾಮಿಯ ದರ್ಶನವಾದಾಗ ನಾಲ್ಕೂ ನಲವತ್ತು.              ಪಂಪದಿಂದ ಸನ್ನಿಧಾನ ಆರು ಕಿ.ಮೀ.
 



ಎರುಮೆಲಿ ಯಲ್ಲಿ ಮೊದಲ ಮೂರು ವರ್ಷದ ಸ್ವಾಮಿಗಳು ಬಣ್ಣ ಹಚ್ಚಿಕೊಂಡು 'ಈಗೋ ' ಬಿಟ್ಟು ಕುಣಿಯುವುದು ಪದ್ದತಿ              


ಅಲ್ಲಿಂದ ವಾವರ್ ಸ್ವಾಮಿಯ ಮಸೀದಿಗೆ ಭೇಟಿ             




'ಪೆರುರ್ ತೋಡು' ವಿನ ಹೊಳೆ





ಕಾಳಕಟ್ಟಿ ಆಶ್ರಮ



    ಮಲಗಲು  ಇದ್ದ ವ್ಯವಸ್ಥೆ















ಅಳದಾ ನದಿ














ಶ್ರೀಲಂಕಾದಲ್ಲಿ ಹುಟ್ಟಿ ಕೆನಡಾಕ್ಕೆ ವಲಸೆಹೋದ ತಮಿಳರಲ್ಲಿ ಕೆಲವರು  ಪ್ರತಿ ವರ್ಷ ಶಬರಿಮಲೆಗೆ ಬರುತ್ತಾರೆ.







ಕಾಡಿನಲ್ಲಿ ಅಂಗಡಿ ಮುಂಗಟ್ಟುಗಳು.




















'ಕಲ್ಲಿಡಂ ಕುಂಡ್ರು'




























                                            

ಐದು ವರ್ಷದಿಂದ ಈ ಒಣಗಿದ ಮರ
ಹಾಗೇ ಇದೆ



























ರಾತ್ರಿ ತಂಗುವ ಸ್ಥಳದಲ್ಲಿ ನಮ್ಮ ಗುಂಪಿನ ಎಲ್ಲರ 'ಇರುಮುಡಿಯನ್ನು' ಒಂದೆಡೆ ಇಟ್ಟು ಭಜನೆ ಮಾಡಿ 'ಹರಿವರಾಸನಂ' ಹಾಡುತ್ತಾರೆ. ಬೆಳಗ್ಗೆ ಹೊರಡುವ ಮುಂಚೆ ಪೂಜೆ ಮಾಡಿ ಹಿರಿಯರು ಇರುಮುಡಿಯನ್ನು ತಲೆಯಮೇಲೆ ಇಟ್ಟಮೇಲೆಯೇ ಮುಂದಿನ ಪ್ರಯಾಣ.




ಕರಿಮಲೆ ತೋಡು












ಕರಿಮಲೆ ಉಚ್ಚಿ













ಪಂಪ




                                              ಪಂಪ ನದಿ




ಪಂಪದಲ್ಲಿ ನಾವು ತಂಗಿದ್ದ ಸ್ಥಳ 'ವಿರಿ ' ಅಂತ ಅಲ್ಲಿನ ಭಾಷೆಯಲ್ಲಿ




                                      ಹದಿನೆಂಟು ಮೆಟ್ಟಿಲು








ತುಪ್ಪ ತುಂಬಿಸಿ ತಲೆಯಮೇಲೆ ಇಟ್ಟು ಕೊಂಡೊಯ್ಯುವ ತೆಂಗಿನಕಾಯಿಯ ಹೋಳು.



ತೆಂಗಿನಕಾಯಿಯ ಹೋಳು ಅಯ್ಯನಿಗೆ ತುಪ್ಪದ ಅಭಿಷೇಕವಾದ ಮೇಲೆ ಇಲ್ಲಿ ಅಗ್ನಿಗೆ ಸಮರ್ಪಣೆ.










ಮಾಳಿಗಪುರತ್ತಮ್ಮನ ಗುಡಿಯ ಸುತ್ತ ತೆಂಗಿನಕಾಯಿ ಉರುಳಿಸುವುದು . 


















ಕೆಲವು ಮುಸ್ಲೀಮರೂ ಅಯ್ಯಪ್ಪನ ಭಕ್ತರು, ಅವರು ಧರಿಸುವ ಬಟ್ಟೆ ಹಸಿರು       ಬಣ್ಣದ್ದು.
ಹದಿನೆಂಟನೆ ವರ್ಷ ಕಲ್ಪವೃಕ್ಷ ಅಯ್ಯಪ್ಪನಿಗೆ ಸಮರ್ಪಿಸುವುದು ಸಂಪ್ರದಾಯ.







ನಡೆಯಲು ಆಗದವರಿಗಾಗಿ ಡೋಲಿ ವ್ಯವಸ್ಥೆ









































3 comments:

Arjun Haarith said...

ಬಹಳ ಚೆನ್ನಾಗಿದೆ. ನಿಮ್ಮ ಲೇಖನ ಹಾಗು ಚಿತ್ರಗಳು ಸುಂದರವಾಗಿದೆ. ನಮ್ಮೆಲರಿಗೂ ಆ ಅನುಭವ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
" ಸ್ವಾಮಿಯೇ ಶರಣಂ ಅಯ್ಯಪ್ಪ "

Doddana Gouda G said...

ನಿಮ್ಮ ದರ್ಶನದ ವಿವರವು ನನಗೆ ಅಯ್ಯಪ್ಪನ ದರ್ಶನ ಮಾಡಿಸಿದಂತೆ ಆಯಿತು ಅದಕ್ಕೆ ನಿಮಗೆ ಕೋಟಿ ವಂದನೆಗಳು. ಹಾಗೆಯೇ ನಿಮಗೆ ಸತ್ಕರಿಸಿದ ಆ ಮಹಾತಾಯಿಯ ವಿಷಯ ಕೇಳಿ ಒಮ್ಮೆ ಕಣ್ಣಲ್ಲಿ ನೀರು ಬಂದಂತಾಯಿತು ಆದಕ್ಕೆ ಹೇಳುವುದೇನೋ ಒಳ್ಳೆಯವರನ್ನು ದೆವರು ಬೇಗನೆ ಕರೆದುಕೊಳ್ಳುತ್ತಾನೆಂದು. ಆ ಮಹಾತಾಯಿಗೆ ನನ್ನಿಂದ ಕೋಟಿ ನಮಸ್ಕಾರಗಳು.

Sridhar C E said...

Hi Venkatesh, Nice commentary and superb photos!! Next to being on the trip with you, this is the 2nd best thing!!

C E Sridhar

Total Pageviews