ಹೀಗೆ ಒಬ್ಬಳು ಗೋಮಾತೆ ...
ಹಸು ಮೆಲಕು ಹಾಕುವ ಪ್ರಾಣಿಗಳ ಗುಂಪಿಗೆ ಸೇರಿದೆ.
ಅದರ ಹೊಟ್ಟೆಯಲ್ಲಿ
ನಾಲ್ಕು ಭಾಗಗಳಿರುತ್ತದೆ.
ತಿಂದ ಆಹಾರ ಮೊದಲ ಭಾಗದಲ್ಲಿ ಸೇರುತ್ತದೆ ಅಲ್ಲಿ ನೆನೆದು ಮೆಲಕು ಹಾಕಿ ಚನ್ನಾಗಿ ಜಗಿದು ನುಂಗಿದಾಗ ಮುಂದಿನ
ಭಾಗಕ್ಕೆ ಸೇರುತ್ತದೆ.
ಎರಡನೇ ಭಾಗದಲ್ಲಿ ತಿಂದ ಮೇವಿನಲ್ಲಿ ಅಕಸ್ಮಾತ್ ಮಿಶ್ರವಾಗಿದ್ದ ಲೋಹ
ಮುಂತಾದವುಗಳು ಉಳಿಯುತ್ತವೆ
ಮೂರನೇ ಭಾಗದ ಕೆಲಸ ಮೇವಿನಲ್ಲಿರುವ ನೀರಿನಾಂಶ, ಪೋಷಕಾಂಶವನ್ನು ಹೀರಿಕೊಳ್ಳುವುದು.
ನಾಲ್ಕನೇ ಭಾಗವೇ ನಿಜವಾದ ಹೊಟ್ಟೆ ನಂತರ ಸಣ್ಣ ಕರಳು, ದೊಡ್ಡ ಕರಳು ಇದು
ಹಸುಗಳ ಜೀರ್ಣಕ್ರಿಯೆಯ ಕ್ರಮ.
ವಿಷಯಕ್ಕೆ ಬರೋಣ..
ನಮ್ಮನೆ ಎದಿರು ಸುಮಾರು ಹಸು ಸಾಕಿದ್ದರು, ಅವರದು ಹಾಲಿನ ವ್ಯಾಪಾರ.
ಒಮ್ಮೆ ಪಶುವೈದ್ಯರು ಹಸು ಒಂದನ್ನು ಪರೀಕ್ಷಿಸುತ್ತಿದ್ದಾಗ ರೂಢಿಯಂತೆ ಏನಾಗಿದೆ ಡಾಕ್ಟ್ರೆ ಅಂದೇ . ಹೊಟ್ಟೆ ತುಂಬಾ ಪ್ಲಾಸ್ಟಿಕ್ ಚೀಲ ಇದೆ ಸರ್ಜರಿ ಮಾಡಬೇಕು. ಈಗಲ್ಲ ತುಂಬು
ಗರ್ಭಿಣಿ, ಹೆರಿಗೆಯ ನಂತರ
ಅಂದ್ರು.
ಆಪರೇಷನ್ ಮಾಡುವುದು ಫೋಟೋ ತೆಗೀಲ ಬ್ಲಾಗ್ ಮಾಡ್ತೀನಿ ಅಂದೇ ಸರಿ ಅಂದ್ರು. ನಾನು
ಮಾನಸಿಕವಾಗಿ ಆ ಒಂದು ಸಂದರ್ಭಕ್ಕೆ ಸಿದ್ದನಾದೆ.
ವಾರದ ನಂತರ ಹೆರಿಗೆಯಾಯಿತು ಹೆಣ್ಣು ಕರು. ಮೂರುದಿನದ ನಂತರ ಕರು
ಸತ್ತುಹೋಯಿತು. ಸರಿಯಾಗಿ
ಮೇವು ತಿನ್ನದೇ ಮೆಲಕು ಹಾಕಲೂ ಆಗದೆ ತಿಂದ ಮೇವು
ಜೀರ್ಣವಾಗದೇ ಹಸುವಿಗೂ, ಗರ್ಭದಲ್ಲಿದ್ದ
ಪುಟ್ಟ ಕಂದಮ್ಮನಿಗೂ ಸರಿಯಾದ ಪೌಷ್ಟಿಕಾಂಶ ಸಿಗದೇ ಕರು ಸರಿಯಾಗಿ ಬೆಳವಣಿಗೆಯಾಗಿರಲಿಲ್ಲ.
ಹಸು ಹೊಟ್ಟೆ ನಾಲ್ಕು ಭಾಗಗಳಿಂದ ಕೂಡಿರುತ್ತೆ ಅಂದೆನಲ್ಲಾ.
ಮೊದಲಭಾಗದಲ್ಲಿ ತಿಂದ ಮೇವು ಮೆಲಕು ಹಾಕುವ
ಸಂದರ್ಭದಲ್ಲಿ ಚೆಂಡಿನಂತೆ ತಿರುಗುತ್ತದೆ, ಆಗ ಮೇವಿನ ಜೊತೆಯಲ್ಲಿ ತಿಂದ ಪ್ಲಾಸ್ಟಿಕ್ ಚೀಲಗಳು
ಒಂದಕ್ಕೊಂದು ಸಿಕ್ಕಿಹಾಕಿಕೊಂಡು ಬಾಯಿಗೆ ಬರುವುದಿಲ್ಲ ಅದು ಹಾಗೆ ಮುಂದುವರೆದು ದೊಡ್ಡ ಗಾತ್ರದ
ಉಂಡೆಯಂತಾಗುತ್ತದೆ.
ಹಸುವಿನ ಹೊಟ್ಟೆ ಭಾಗದಲ್ಲಿ ಒತ್ತಿದರೆ ಕಲ್ಲಿನಂತಿರುತ್ತದೆ, ಹಸು ಓಡಾಡುವುದಿಲ್ಲ, ಮೆಲಕು ಹಾಕುವುದಿಲ್ಲ, ದಿನದಿನಕ್ಕೆ ಕ್ರುಶವಾಗುತ್ತದೆ , ಹಲ್ಲು ಕಡಿಯುತ್ತಿರುತ್ತದೆ (grinding teeth ).
ಹಸುವಿನ ಹೊಟ್ಟೆ ಭಾಗದಲ್ಲಿ ಒತ್ತಿದರೆ ಕಲ್ಲಿನಂತಿರುತ್ತದೆ, ಹಸು ಓಡಾಡುವುದಿಲ್ಲ, ಮೆಲಕು ಹಾಕುವುದಿಲ್ಲ, ದಿನದಿನಕ್ಕೆ ಕ್ರುಶವಾಗುತ್ತದೆ , ಹಲ್ಲು ಕಡಿಯುತ್ತಿರುತ್ತದೆ (grinding teeth ).
ನಿಗದಿಯಾದ ದಿನ ಬೆಳಗ್ಗೆ ಎಂಟು ಮೂವತ್ತಕ್ಕೆ ಶುರುವಾದ ಆಪರೇಷನ್ ಪ್ರಕ್ರಿಯೆ,ಮುಗಿದಿದ್ದು ಮಧ್ಯಾನ್ಹ ಒಂದೂಮೂವತ್ತಕ್ಕೆ.
ಶಸ್ತ್ರ ಚಿಕಿತ್ಸೆಯ ವಿವಿಧ ಹಂತಗಳು.
ಮೊದಲ ಪದರ
ಎರಡನೇ ಪದರ , ಬೆಳ್ಳಗೆ ಕಾಣುತ್ತಿರುವುದು ಮೂರನೇ ಪದರ
ಹೊಟ್ಟೆಯ ಮೊದಲ ಭಾಗ
ಇಲ್ಲಿಂದ ಮುಂದಿನ ಹಂತ ವೀಡಿಯೊ ತುಣುಕಿನಲ್ಲಿ ನೋಡಿ.
ಹಸು ಹೊಟ್ಟೆಯಲ್ಲಿದ್ದದ್ದು ನೀರಿನಂಶ ಸೇರಿ ಬರೋಬ್ಬರಿ ಎಂಬತೈದು ಕೆಜಿ
ಪ್ಲಾಸ್ಟಿಕ್ ಚೀಲಗಳು.
ಪ್ಲಾಸ್ಟಿಕ್ ನೆಲ್ಲಾ ತೆಗೆದ ಮೇಲೆ ಹೊಟ್ಟೆಯ ಅಡಿಯಲ್ಲಿದ್ದ ಲೋಹದ ತುಣುಕುಗಳು
ಹಾಗು ಮರಳು.
ಈ ವಿಡಿಯೋ ತುಣುಕು ನೋಡಿ, ಹಸು ಹೊಟ್ಟೆಯಿಂದ
ಪ್ಲಾಸ್ಟಿಕ್ ಚೀಲಗಳನ್ನು ಕೀಳಲು ಕಷ್ಟ ಪಡುತ್ತಿರುವುದನ್ನು ಗಮನಿಸಿ.
ಮೆಲಕು ಹಾಕುವ ಪ್ರಾಣಿಗಳು.
ಕುರಿ, ಮೇಕೆ, ಹಸು, ಎಮ್ಮೆ, ಕಾಡುಕೋಣ, ಜಿರಾಫೆ, ಯಾಕ್, ಒಂಟೆ ಹಾಗು ಎಲ್ಲಾ ಜಾತಿಯ ಜಿಂಕೆಗಳು.( ಕಾಡಿನಲ್ಲಿ ಪ್ರವಾಸಕ್ಕೆಂದು ಹೋಗುವವರು ಉಳಿದ ತಿಂಡಿಯನ್ನು ಪ್ಲಾಸ್ಟಿಕ್ ಚೀಲದ ಸಮೇತ ಹೊರಗೆ ಎಸೆದದ್ದನ್ನು ಜಿಂಕೆಗಳು ತಿಂದು ಸತ್ತ ಉದಾಹರಣೆಗಳು ಅರಣ್ಯ ಇಲಾಖೆಯಲ್ಲಿ ಸಾಕಷ್ಟಿವೆ.)
ಅಂತಿಮವಾಗಿ.
ಈಗ ಪ್ರಶ್ನೆ ಕೇಳಬೇಕಾಗಿದ್ದು ಯಾರು ಯಾರಿಗೆ ನೀವೇ ಹೇಳಿ.
ಹಾಲು ಕರೆದಾಕ್ಷಣ ಹಸುವಿಗೂ ನಮಗೂ ಯಾವುದೇ ಸಂಭಂದವಿಲ್ಲವೆಂಬಂತೆ
ಹಸುವಿಗೆ ಹೊಡೆದು ಹೊರದಬ್ಬುವ ಹಸುಮಾಲಿಕರನ್ನೋ.
ಸಿಕ್ಕಿದ್ದನ್ನೆಲ್ಲಾ ತಿನ್ನುವ ಹಸುವನ್ನೋ.
ಅರೆದುಳಿಯುವ ತಿಂಡಿ
ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲಗಳ ಸಮೇತ ಹೊರಗೆಸೆಯುವ
ಹಾಗು ಕೊಳ್ಳುವ ಪ್ರತಿ ಪದಾರ್ಥಕ್ಕೂ ಪ್ಲಾಸ್ಟಿಕ್ ಚೀಲಗಳನ್ನೂ ಕೇಳುವುದೇ ನಮ್ಮ
ಹಕ್ಕೆಂದು ತಿಳಿದಿರುವ ಮಹಾನ್ ನಾಗರೀಕ ಬಂಧುಗಳನ್ನೋ.
ದಿನಸಿ, ಹಣ್ಣು ತರಕಾರಿಗಳನ್ನು ಕೊಳ್ಳಲು ಹೋದಾಗ ಮನೆಯಿಂದ
ಚೀಲಗಳನ್ನೂ, ಹೋಟೆಲ್ ಗಳಿಂದ
ತಿಂಡಿ ಪದಾರ್ಥಗಳನ್ನು ತರಲು ಮನೆಯ ಡಬ್ಬಿ ಗಳನ್ನೂ ಬಳಸಿದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ
ತಪ್ಪಿಸ ಬಹುದು ಎಂಬುದು ನಾನು ತಿಳಿದು ಕೊಂಡಿರುವ ಹಾಗು ರೂಡಿಸಿಕೊಂಡಿರುವ ವಿಷಯ. sir..madam..what about you...
14 comments:
very sad moment. I just cant imagine how cruel we are towards animals, by throwing these garbage.
A nice awareness blog.
TFS
ನೋಡಲಾರೆ, ನೋಡದೇ ಇರಲಾರೆ, ನಾವೆಂತ ಕಟುಕರು.-mshebbar
One of the best awareness blog i have read... This is the best time to wake up and make some difference. Thank you for sharing
ಸ್ವಾಮಿಗಳೇ, ಇಂಥ ಚಿತ್ರಗಳು, ವೀಡಿಯೊ ಗಳು ನಮ್ಮ ನಾಗರೀಕರ? ಮನ ಕಲಕುವ ಚಿತ್ರಗಳಾಗಿವೆ. ಇಷ್ಟು ಕಷ್ಟ ಮತ್ತ್ತು ಇಷ್ಟ, ಪಟ್ಟು ತೆಗೆದೂ, ನಮ್ಮಂಥಹ ಕವರುದಾರಿಗಳಿಗೆ ಮನವರಿಕೆ ಪಡಿಸಿದ್ದೀರಿ . ಮನುಷ್ಯರು, ಆ ಗೋಮಾತೆಯ ಹಾಲನ್ನು ಕುಡಿದು, ಹಸುವನ್ನೇ ಮರೆಯುವಂತೆ, ಈ ಬ್ಲಾಗನ್ನು ಓದಿ ಮತ್ತೆ ಪ್ಲಾಸ್ಟಿಕ್ ಕಾವರ್ ಗಳನ್ನು ಎಲ್ಲೆಂದರಲ್ಲಿ ಎಸೆದರೆ, ಅರ್ಥವಿರುವುದಿಲ್ಲ . ನಿಮ್ಮ ಈ ಸಮಾಜದ ಬಗ್ಗೆ ಇರುವಂತಹ ಕಳ ಕಳಿಯನ್ನು ಮೆಚ್ಚುವಂತಹದು . ದನ್ಯವಾದಗಳು.
I take a oath "even the smallest of small piece of plastic will not fall from my hand except to a closed dust bin." Thnaks.
Dear Venkatesh,
My kannada is very poor, but your blog is heart touching....most cruelest animal on this earth is man. This should be circulated to maximum people....but really one needs guts to see this images....wonderful awareness blog, my congratulations to you and hopefully it will bring some change in peoples attitudes.
Regards,
Chandrashekar
after seeing your , my heart starts crying, you have exposed our cruel attitude towards animals , we are the most dangerous creatures in this planet. most knowledgeable info. thanks for this info.
ಆ ಹಸುವಿನ ಹೊಟ್ಟೆಯಲ್ಲಿ ಏನೆಲ್ಲ ಇದೆ !!
ನಾವೂ ಕೂಡ ..
ಮಾನಸಿಕವಾಗಿ...
ಭೌತಿಕವಾಗಿ ಕುಲುಷಿತರಾಗುತ್ತಿದ್ದೇವೆ...
very disgusting :( :(
one of the best blogs..but so many things contribute to the state we are in. anyway congrats for this writeup u deserve accolades
ಅಬ್ಬ! ಮಾನವನ ಕ್ರೌರ್ಯಕ್ಕೆ ಕೊನೆಯೇ ಇಲ್ಲ. ಹೀಗೆ ಮುಂದುವರೆದರೆ ಈ ಪ್ಲಾಸ್ಟಿಕ್ ನಮ್ಮ ಭೂಮಿಯನ್ನು ಅದರ ಸಕಲ ಜೀವಜಂತುವನ್ನು ನಾಶ ಮಾಡುವುದರಲ್ಲಿ ಅನುಮಾನವಿಲ್ಲ.
ಅಬ್ಬಾ..ದೇವರೆ ಕಾಪಾಡಬೇಕು..!!
Uff.... I couldn't see all the pictures!!! But read ur article.. very touchy... felt very bad:(:(
thanks for it!
The environment pollution caused by all of us - we throw garbage all over, spit everywhere, smoke anywhere, we do all nonsense as though it is our birth right. The impact is grave danger to environment. This is a case in point. Arise, awake and act - otherwise the same state will to mankind as that has happened to our Mother.
Post a Comment