ಕಳೆದ ಮುಂಗಾರು ಸಮಯದಲ್ಲಿ ಒಂದು ಪ್ರವಾಸ ಮಾಡಿದ್ದೆ ಅದಕ್ಕೆ ನಾನಿಟ್ಟ ಹೆಸರು ರೈನ್ ಟೂರಿಸಂ.
ಮುಂಗಾರು ಮಳೆ ಹೆಚ್ಚಾಗಿ ಬೀಳೋ ಪ್ರದೇಶಗಳಾದ ತೀರ್ಥಹಳ್ಳಿ,ಆಗುಂಬೆ,ಮಾಸ್ತಿಕಟ್ಟೆ,ಯಡೂರು,ಹೊಸನಗರ ಮುಂತಾದ ಕಡೆ ಅಲಿಯೋದು. ನಾನೇನ್ ಮಾಡಿದೆ ಹೇಳ್ತೀನಿ ಕೇಳಿ, ಮುಂಗಾರು ಮಳೆ ಜೋರು ಅಂತ ತಿಳಿದ ಕೂಡಲೇ ಬೆಳಗ್ಗೆ ಆರುಗಂಟೆ ಇಂಟರ್ ಸಿಟಿ ಎಕ್ಸಪ್ರೆಸ್ ಹಿಡಿದು ಬೀರೂರ್ ಜಂಕ್ಷನ್ ಇಳಿದೆ ಸಮಯ ಒಂಬತ್ತೂವರೆ
ಶಿವಮೊಗ್ಗ-ಬೀರೂರು-ಆನಂದಪುರ ಟ್ರೈನ್ ಹತ್ತಿ ಶಿವಮೊಗ್ಗ ಸೇರಿದಾಗ ಹನ್ನೆರಡುವರೆ,ಅಲ್ಲಿಂದ ತೀರ್ಥಹಳ್ಳಿ ಮೂಲಕ ಕುಪ್ಪಳಿ. ಕುವೆಂಪು ಅಧ್ಯಯನ ಕೇಂದ್ರದಲ್ಲಿ ಒಂದು ರೂಂ ಹಿಡಿದೆ,ಮಾರನೆ ದಿನ ಬೆಳಗ್ಗೆ ಬಹಳ ದಿನಗಳಿಂದ ಕುಪ್ಪಳಿಯಲ್ಲಿ, ಮಳೆಗಾಲದಲ್ಲಿ ಒಂದು ಕಾದಂಬರಿ ಓದೋ ಆಸೆ ಇತ್ತು ಓದಿ ಮುಗಿಸಿದೆ.
ಕವಿಮನೆ |
ಕುವೆಂಪು ಸಮಾಧಿ |
ತೇಜಸ್ವಿ ಸಮಾಧಿ |
ಅಲ್ಲಿಂದ ಆಗುಂಬೆ, ಕಸ್ತೂರಿಯಕ್ಕ ಅವರ ಮನೆಯಲ್ಲಿ ಕ್ಯಾಂಪ್,(ಹೋಂ ಸ್ಟೇ) ನೂರಿಪ್ಪತ್ತು ವರ್ಷದ ಹಳೆ ತೊಟ್ಟಿ ಮನೆ,ಶಂಕರ್ ನಾಗ್ ರ ಮಾಲ್ಗುಡಿ ಡೇಸ್ ಬಾಗಶಃ ಚಿತ್ರೀಕರರಣವಾದ ಮನೆ. ನಮ್ಮ ಸ್ವಂತ ಅಕ್ಕನ ಮನೆಯೇನೋ ಅನ್ನುವಸ್ಟು ಸಲಿಗೆ. ಹೋದ ತಕ್ಷಣ ಯಾರು ಏನು ಎಂದು ಕೇಳದೆ ಸೀದಾ ಊಟದ ಮನೆಗೆ ಕರೆದೊಯ್ದು ದೋಸೆ, ಚಟ್ನಿಪುಡಿ,ಬೂದ ಕುಂಬಳಕಾಯಿ ಹಲ್ವಾ,ಬಿಸಿಬಿಸಿ ಕಷಾಯದ ಸ್ವಾಗತ. ಕತ್ತಲೇಅಂದ್ರೆ ನನಗಿಷ್ಟ, ಹೇಳಿ ಮಾಡಿಸಿದ ಹಾಗೆ ಆ ಊರಲ್ಲಿ ಮೂರ್ದಿನದಿಂದ ಕರೆಂಟು ನಾಪತ್ತೆ ,ರಾತ್ರಿ ಮಹಡಿಯಮೇಲಿನ ರೂಮಿನಲ್ಲಿ ಗಬೋ ಎನ್ನುವ ಕತ್ತಲಲ್ಲಿ ಬೆಚ್ಚಗೆ ಮಲಗಿದೆ.
ಕಸ್ತೂರಿಯಕ್ಕ ಅವರ ಮನೆ
ನಾನು ಉಳಿದುಕೊಂಡಿದ್ದ ಕೊಠಡಿ |
ಊಟದ ಮನೆ |
ಆಗುಂಬೆ ಸರ್ಕಲ್ |
ಶ್ರುಂಗೇರಿ ರಸ್ತೆ |
ಎದಿರುಮನೆ ಬಾವಿ ಮಾರನೆ ದಿನ ಮಧ್ಯಾಹ್ನದವರೆಗೂ ಮನೇಲೆ ಇದ್ದೆ ಮಳೆ ನೋಡ್ತಾ. ಊಟ ಮುಗಿಸಿ ಆಗುಂಬೆ ರೈನ್ ಫಾರೆಸ್ಟ್ ರಿಸರ್ಚ್ ಸ್ಟೇಷನ್ (ಕಾಳಿಂಗ ಸರ್ಪದ ಬಗ್ಗೆ) ನೋಡೋಣ ಅಂತ ಹೊರಟೆ, ಮಳೆ ನಿಂತಿತ್ತು. |
ಆಗುಂಬೆ ರೈನ್ ಫಾರೆಸ್ಟ್ ರಿಸರ್ಚ್ ಸ್ಟೇಷನ್ ರಸ್ತೆ |
ಮಳೇಲಿ, ಕಾಡಲ್ಲಿ ಒಬ್ಬರೇ ಓಡಾಡಬೇಕು ಅಂದ್ರೆ ಎರಡು ಗುಂಡಿಗೆ ಬೇಕು ಕಣ್ರೀ .
ಎರಡನೆ ದಿನ ಬೆಳಗ್ಗೆ ತಿಂಡಿ ಮುಗಿಸಿ ಮಳೆಯಲ್ಲಿ ತಿರುಗಾಡೋಣ ಅಂತ ಶ್ರುಂಗೇರಿ ರಸ್ತೆಯಲ್ಲಿ ಮುಂದುವರೆದು ಬಲಕ್ಕೆ ಬರ್ಕಣ,ಜೋಗಿಗುಂಡಿ ರಸ್ತೆಯಲ್ಲಿ ಮೂರ್ ಕಿಲೋಮೀಟರ್ ಹೋಗಿಬಂದೆ.ಉಡುಪಿ ರಸ್ತೆ ಯಲ್ಲಿದ್ದ ವೇಣು ಗೋಪಾಲ ಸ್ವಾಮಿ ದೇವಸ್ತಾನಕ್ಕೆ ಹೋಗಿ, ದೇವರ ದರ್ಶನ ಮಾಡಿ ಪ್ರದಕ್ಷಣೆ ಮಾಡಲು ಎಂತ ಮಜಾ ಗೊತ್ತಾ ಮೂರುಇಂಚು ಬೆಳೆದ ಹುಲ್ಲಿನಮೇಲೆ ನಾಲ್ಕೈದು ಇಂಚು ನೀರು ನಡಿಯೋದೆ ಎಂತ ಸುಖ. ಊಟ ಮುಗಿಸಿ ತೀರ್ಥಹಳ್ಳಿ ಮೂಲಕ ಹೊಸನಗರದ ಗೆಳೆಯನೊಬ್ಬನ ಮನೆಯಲ್ಲಿದ್ದು ಮಾರನೆ ದಿನ ಜೋಗ ನೋಡಿಬಂದೆ.
ರಾಮಚಂದ್ರಾಪುರದ ಮಠ |
ಮಾಸ್ತಿ ಕಟ್ಟೆಯ ಹೋಟೆಲ್ ನಲ್ಲಿ ಊಟ ಮಾಡಿ ಎರಡು ಗಂಟೆ ಅಲೆದೆ, ಅಂಗಡೀಲಿ ಒಂದುರೂಪಾಯಿ ಬೆಲೆಯ ಚಕ್ಕುಲಿ, ಮೈಸೂರು ಪಾಕು ತಿಂದೆ,ಅಲ್ಲಿದ್ದ ನಾಯಿಗೆ ಬಿಸ್ಕೆಟ್ ಕೈಯಾರೆ ತಿನ್ನಿಸಿದೆ.ತೀರ್ಥಹಳ್ಳಿ ಮೂಲಕ ಶಿವಮೊಗ್ಗ ತಲುಪಿ ರಾತ್ರಿ ರೈಲು ಹಿಡಿದು ಬೆಂಗಳೂರಿಗೆ ಬಂದೆ.
ಒಂದು ಮಾತಿದೆ two is company three is crowd ಅಂತ
ಪ್ರಕೃತಿ ನೋಡಲು ಅದರ ಜೊತೆ ಮಾತಾಡಲು ಒಬ್ಬರೇ ಇರಬೇಕು ಅದೊಂತರ ತಪಸ್ಸು, ಮನಸ್ಸುಮನಸ್ಸುಗಳ ಪಿಸುಮಾತು, ಇಲ್ಲಿ alone is company two is crowd.
ಕೊನೇ ಮಾತು; ರೈನ್ ಟೂರಿಸಂಗೆ ಕೆಲವು ಸಲಹೆ ಇದೆ, ಅವು ಪಾಲಿಸಿದರೆ ಅದರ ಮಜಾನೆ ಬೇರೆ
1. ಒಳ್ಳೆಯ ರೈನ್ ಕೋಟ್
2 .ಬೆಚ್ಚಗಿನ ಬಟ್ಟೆ
3 .ಓದಲು ಒಳ್ಳೆಯ ಪುಸ್ತಕಗಳು
4 .ಮೊಬೈಲ್ ಫೋನ್ ಬೇಡ
5 .ತಿರುಗಾಟಕ್ಕೆ ಸ್ತಳೀಯ ಬಸ್ಸು
6 .Luxury ಬೇಡ.
ರೈನ್ ಟೂರ್ನಲ್ಲಿ ಏನೆಲ್ಲಾ ತಿಂದೆ
ಬೆಳಗ್ಗೆ ತಿಂಡೀಗೆ
ಒಂದಿನ ಹಸಿತರಕಾರಿ ಮತ್ತು ಹಣ್ಣುಗಳು ಇಲ್ಲಿಂದಲೇ ತಗೊಂಡು ಹೋಗಿದ್ದು
ಕಸ್ತೂರಿಯಕ್ಕ ಮನೆಯಲ್ಲಿ ಹಲಸಿನಹಣ್ಣು , ಕಷಾಯ
ಹೊಸನಗರದ ಸ್ನೇಹಿತರಮನೇಲಿ ಪಲಾವ್, ಮನೆಮುಂದೆ ಕರೆದ ಹಸುವಿನಹಾಲು.
ರಾಮಚಂದ್ರಾಪುರದ ಮಠದಲ್ಲಿ ಅಕ್ಕಿ ಗಂಜಿ, ಕಲ್ಲುಪ್ಪು,ಉಪ್ಪಿನಕಾಯಿ,ಕಷಾಯ.
ಊಟಕ್ಕೆ
ಕಸ್ತೂರಿಯಕ್ಕ ಅವರ ಮನೆಯಲ್ಲಿ ಕೆಂಪಕ್ಕಿ ಅನ್ನ,ತಿಳೀ ಸಾರು, ಕುಂಬಳಕಾಯಿಬಳ್ಳಿಯ ಪಲ್ಯ, ಬಾಳೆದಿಂಡು ಹಲಸಂದಿ ಪಲ್ಯ, ,ಸಂಡಿಗೆ, ಉಪ್ಪಿನಕಾಯಿ. ಮಲೆನಾಡಿನ ಊಟದ ಮಜಾನೆ ಬೇರೆ ಕಣ್ರೀ .
ಹೊಸನಗರದ ಸ್ನೇಹಿತರಮನೇಲಿ ರಾಗಿ ಮುದ್ದೆ ಹುರುಳಿಕಾಳಿನ ಬಸ್ಸಾರುಪಲ್ಯ ,ಹಪ್ಪಳ.
evening snacks
ಕಸ್ತೂರಿಯಕ್ಕ ಅವರ ಮನೆಯಲ್ಲಿ :ಮೆಣಸಿನ ಬೋಂಡ, ಅಲೂ ಬೋಂಡ.
ಹೊಸನಗರದ ಸ್ನೇಹಿತರಮನೇಲಿ : ರಾಗಿರೊಟ್ಟಿ.
ಹಲಸಂದಿಕಾಳು ನುಚ್ಚಿನ ಮಸಾಲೆವಡೆ.
ಹೇಗಿತ್ತು,
ನೀವೊಬ್ಬರೇ ಹೋಗಿ ಬರ್ತೀರಾ ತಾನೇ
ಉತ್ತರಕ್ಕಾಗಿ ಎದಿರುನೋಡುವೆ
ನಿಮ್ಮವ
ವೆಂಕಟೇಶ ಮೂರ್ತಿ
4 comments:
An excellent article. Worth the name wildeagle. A honest & very good attempt to share the happiness & thrilling moments. Looking forward for more.
ಬಹಳ ಚೆನ್ನಾಗಿದೆ .. ಅದನ್ನು ಓದಿ ನಾನು ಕೂಡ ಪಶ್ಚಿಮ ಘಟ್ಟಗಳ್ಳನ್ನ ಸುತ್ತಿ ಕೊಂಡು ಬರೋಣ ವೆಂದು ಅನಿಸುತ್ತಿದೆ. ಈ ಮುಂಗಾರು ಮಳೆಯ ಸಂಧರ್ಭದಲ್ಲಿ , ಅಲ್ಲಿಗೆ ಹೋದರೆ ಏನೋ ಖುಷಿ ಸಿಗುತ್ತದೆ.
ಛಾಯ ಚಿತ್ರಗಳು ಕೂಡ ಸಕ್ಕತ್ ಆಗಿದೆ.
ಬ್ಲಾಗ್ ಅನ್ನು ಹಂಚಿದಕ್ಕೆ ಧನ್ಯವಾದಗಳು.
ಅರ್ಜುನ್
Very good indeed
Ravi
bahalaa.. chennagittu nimma rain tourism photographs... naave alliddahaagittu... nijavaagiyou navella prakruthiyanna miss maadikolluttiddeve.. what a wonerful nature the God has created... fantastic photos.. but.. we are missing you in those photos ... from hereafter nimma mukhavu blog na.. nimma photogalallelladaru kaanali.. ok Good Keep it up venkatesh murthy... Electrical contractors nallu vobba rasika adrallu vondu volleya havyasaviruva vyakti iruvude.. namge santosha
Post a Comment