Wednesday, June 15, 2011

ಅಳಿಲುಮರಿಗಳ ಬೀಳ್ಕೊಡಿಗೆ

ಹೆಲೋ,
ಕಳೆದ ವಾರ ಅಳಿಲು ಮರಿ ನಾಯಿಯಿಂದ ರಕ್ಷಿಸಿದ ಬಗ್ಗೆ ಬರೆದಿದ್ದೆ, ಬರೆದ ಕೆಲವು ಗಂಟೆ ಕಳದಿತ್ತೋ ಇಲ್ಲವೋ   ಮನೆ ಓಣಿಯಲ್ಲಿ ಇನ್ನೊಂದು ಮರಿ ಅದರಮ್ಮನನ್ನು ಹುಡುಕಿಕೊಂಡು ಓಡಾಡುತ್ತಿತ್ತು, ಅಮ್ಮನ ಸುಳಿವೇ ಇರಲಿಲ್ಲ.
ಸರಿ ಅದನ್ನೂ ಬಟ್ಟೆ ಸಹಾಯದಿಂದ ಹಿಡಿದು ಮೊದಲಮರಿ ಇಟ್ಟಿದ್ದ ಬಕೆಟ್ ನಲ್ಲಿ ಇರಿಸಿದೆ. ಎರಡು ಒಂದನೊಂದು ತಬ್ಬಿಕೊಂಡು ಸುರುಳಿಸುತ್ತಿಕೊಂಡು ಬೆಚ್ಚಗೆ ಮಲಗಿದವು.  ಉತ್ತರಲ್ಲಿ ಚಾರ್ ಧಾಮ್ ಯಾತ್ರೆಗೆ ಹೋಗಿದ್ದಾಗ ಚಳಿಗೆ  ಕೊಂಡಿದ್ದ ಉಲ್ಲನ್ ಕೈಚೀಲ ಮರಿಗಳ ಜೊತೆಗೆ ಇಟ್ಟಿದ್ದೆ.   ಊಟ ತಿನ್ನಿಸಲೆಂದು ಮೇಲೆ ಮುಚ್ಚಿದ್ದ ಬಟ್ಟೆ ಸರಿಸಲು ಓಡಿಹೋಗಿ ಕೈಚೀಳದೊಳಗೆ ಸೇರಿಕೊಂಡುಬಿಡುತಿದ್ದವು, ಈಚೆ ತೆಗೆಯುವುದೇ ಒಂದು ಸಾಹಸ.  
               ಹೀಗೆ ಒಂದುವಾರ ಕಳೆಯಿತು ಹಾಲಿನ ಜೊತೆ ಹಣ್ಣು ತಿನ್ನಲು ಶುರುಮಾಡಿದವು, ಒಂದಿನ ಒಂದುಮರಿ ತೀರ ನಡುಗಲು ಶುರುಮಾಡಿತು ಜೊತೆಗೆ ಮೈ ಸ್ವಲ್ಪ ಬಿಸಿ. ಸರಿ ಕ್ರೋಸಿನ್ ಮಾತ್ರೆಯನ್ನು  ಬ್ಲೇಡ್ ನಿಂದ ಕೆರೆದು ಒಂದು ರಾಗಿ ಕಾಳಿನಷ್ಟು ಪುಡಿಯನ್ನು ಒಂದೆರೆಡು ಹನಿ ಹಾಲಿನೊಂದಿಗೆ ಬೆರೆಸಿ ಕುಡಿಸಿದ ಮೇಲೆ ಸ್ವಲ್ಪ ಚೇತರಿಸಿಕೊಂಡಿತು. ಕೊನೆಗೆ ನನ್ನಮ್ಮನಿಗೆ ಹೇಳಿದೆ ಮನೆಯಲ್ಲಿ ಇವುಗಳನ್ನು ಸಾಕುವುದು ಕಷ್ಟದ ಕೆಲಸ ಜೊತೆಗೆ ಅದರ ಸ್ವಾತಂತ್ರ್ಯ ಕಸಿದು ಕೊಂಡ ಹಾಗಾಗುತ್ತೆ. ಇಲ್ಲಂತೂ ಹೊರಗೆ ಬಿಡಲು ಸಾದ್ಯವಿಲ್ಲ ನಾಯಿಗಳ ಕಾಟ ಹಾಗಾಗಿ ಅವನ್ನು ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಗೆ ಕೊಡೋಣ ಅಲ್ಲಿಯಾದರೆ ಡಾಕ್ಟರ್ ಇರುತ್ತಾರೆ ನೋಡಿಕೊಳ್ಳಲು ಮತ್ತು ಬೆಳೆದ ಮೇಲೆ ಪಕ್ಕದಲ್ಲೇ ಇರುವ ಕಾಡಿಗೆ ಬಿಡುತ್ತಾರೆ ಎಂದು ಹೇಳಿ ಅವುಗಳನ್ನು  ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಗೆ ಕೊಟ್ಟು ಸ್ವಲ್ಪ ದೇಣಿಗೆ ಕೊಟ್ಟುಬಂದೆ. ಭಾರವಾದ ಮನಸ್ಸಿನಿಂದ.
  ಮರಿಗಳಿಗೆ ನನ್ನಮ್ಮನ ಬೀಳ್ಕೊಡಿಗೆಯ ಕೊನೆಯ ತುತ್ತು ನೀಡಿದ  ಕ್ಷಣದ  ಫೋಟೋ ಮತ್ತು ಒಂದು ವಿಡಿಯೋ ತುಣುಕು ಇಲ್ಲಿವೆ ನೋಡಿ.








 

No comments:

Total Pageviews