Sunday, July 24, 2011

ಮತ್ತೆ ಮಲೆ(ಮಳೆಯ)ನಾಡಿಗೆ.....




ಗೆಳೆಯರ ಪ್ರೀತಿಪೂರ್ವಕ ಒತ್ತಾಯದಮೇಲೆ ಮತ್ತೆ ಮಲೆನಾಡಿಗೆ ಮಳೆ  ಸೊಬಗು ಅನುಭವಿಸಲಿಕ್ಕೆ ಹೋಗುವ ಅವಕಾಶ ಒದಗಿಬಂತು.
ಸೋಮವಾರ ಹದಿನೆಂಟರಂದು  ರಾತ್ರಿ ಹನ್ನೊಂದುಕಾಲಿಗೆ ಬೆಂಗಳೂರಿನಿಂದ  ಶಿವಮೊಗ್ಗ ಎಕ್ಸ್ಪ್ರೆಸ್ ರೈಲಿನಲ್ಲಿ  ಹೊರೆಟು, ಮರುದಿನ  ಶಿವಮೊಗ್ಗದಿಂದ ಉಡುಪಿ ಕಡೆ ಹೋಗುವ ಬಸ್ ಹಿಡಿದು ಹೆಬ್ರಿ ಹತ್ತಿರ ಸೀತಾನದಿ ನಿಸರ್ಗಧಾಮ ತಲುಪಿದಾಗ ಬೆಳಗ್ಗೆ ಹತ್ತು ಗಂಟೆ. ಅಲ್ಲಂತೂ ಕುಂಭ ದ್ರೋಣ ಮಳೆ, ಆ ದಿನ ಅಲ್ಲೇ ಉಳಿದು ಮಾರನೆ ದಿನ ಮಧ್ಯಾಹ್ನದ ಮೇಲೆ ಆಗುಂಬೆಯತ್ತ ಪ್ರಯಾಣ.
ಆಗುಂಬೆಯಲ್ಲಿ ಕಸ್ತೂರಿ ಅಕ್ಕನ ಮನೆಯಲ್ಲಿ (ದೊಡ್ಡಮನೆ) ಠಿಕಾಣಿ. ಸಂಜೆ ಸನ್ ಸೆಟ್ ವ್ಯೂ ಪಾಯಿಂಟ್ ಕಡೆಗೆ (ಸನ್ ಸೆಟ್ ನೋಡಲಿಕ್ಕಂತೂ ಅಲ್ಲ). ಮಾರನೆದಿನ ಬೆಳಗ್ಗೆ ಆಗುಂಬೆ ಕಾಡಿನಲ್ಲಿ ಅಲೆದಾಟ ನಂತರ ಕುಂದಾದ್ರಿ ಬೆಟ್ಟಕ್ಕೆ. ಅಲ್ಲಿಂದ ಸೀದಾ ಹೋಗಿದ್ದು ಜೋಗಿಗುಂಡಿ ಜಲಪಾತ ನೋಡಲಿಕ್ಕೆ.
ಊಟವಾದಮೇಲೆ  ಕಸ್ತೂರಿ ಅಕ್ಕನ ಜೊತೆ ಹರಟೆ, ಕಷಾಯ ಕುಡಿದು ಆಗುಂಬೆ ಊರು ಸುತ್ತಾಟ.     ಆಗುಂಬೆಯಿಂದ ಸಂಜೆ ಏಳು ಗಂಟೆಗೆ ಬಸ್ ಹಿಡಿದು, ಶಿವಮೊಗ್ಗದಿಂದ ರಾತ್ರಿ ಹತ್ತೂಕಾಲಿಗೆ ರೈಲು ಹಿಡಿದು ಬೆಂಗಳೂರು ತಲುಪಿ ಮನೆಗೆ ಬಂದಾಗ ಬೆಳಗ್ಗೆ ಐದಾಗಿತ್ತು.

  ಅಲ್ಲೊಂದಷ್ಟು ತೆಗೆದ ಫೋಟೋಗಳಿವೆ ನೋಡಿ.

ಈ ಸಲದ ಕಸ್ತೂರಿ ಅಕ್ಕನ ಮನೆಯ ಊಟದ ಬಗ್ಗೆ ಕೊನೆಯಲ್ಲಿ ಬರೆದಿರುತ್ತೇನೆ.ಅವರಿಂದ ಮಾಹಿತಿ ಪಡೆದು.
           




ಆಗುಂಬೆಘಾಟ್ ಮೂಲಕ ಹೆಬ್ರಿ ಕಡೆ ಹೋಗುವಾಗ ಪ್ರಕೃತಿ ಸೊಬಗು ಆನಂದಿಸಲು ಡ್ರೈವರ್ ಪಕ್ಕದ ಸೀಟಲ್ಲೇ ಕೂರಬೇಕು, ಅದರ ಮಜಾ ಅಲ್ಲಿ ಕೂತಿದ್ದವರಿಗಷ್ಟೇ ಗೊತ್ತು.  










































ಸೀತಾನದಿ ನಿಸರ್ಗಧಾಮ. ದಟ್ಟ ವನ ಸಂಪತ್ತು, ಪಕ್ಕದಲ್ಲೇ ಹರಿಯುವ ಸೀತಾನದಿ (ಇಲ್ಲಿ ರಿವೆರ್ ರಾಫ್ಟಿಂಗ್ ಸಹ ಇದೆ, ಅರಣ್ಯ ಇಲಾಖೆಯು ಶುಲ್ಕ ಹೆಚ್ಚು ಮಾಡಿದ್ದರಿಂದ ಸದ್ಯಕ್ಕೆ ನಿಂತಿದೆ), ಮಕ್ಕಳಿಗೆ ರಜಾ ದಿನಗಳನ್ನು ಕಳೆಯಲು ಹೇಳಿಮಾಡಿಸಿದ ಸ್ಥಳ . ಉಳಿದುಕೊಳ್ಳಲು ಒಂದು ಕಾಟೇಜ್,ಹತ್ತು ಟೆಂಟ್ ಗಳು ಹಾಗು ಹನ್ನೆರಡು ಹಾಸಿಗೆಯ ಒಂದು ದಾರ್ಮಿಟರಿ ಯ ವ್ಯವಸ್ತೆ ಇದೆ, ಅಡುಗೆ ಮಾಡಲು  ಸಿಬ್ಬಂದಿಯವರೂ ಇದ್ದಾರೆ. ಇದರ ಮೇಲ್ವಿಚಾರಣೆ  ಅರಣ್ಯ ಇಲಾಖೆಯವರದು.








ನಾವಿದ್ದ ದಾರ್ಮಿಟರಿ

























                                                                 














ದಾರ್ಮಿಟರಿ ಯ ಮುಂಬಾಗಿಲಿನ ಹೊಸಲಿನಿಂದ ಉಕ್ಕಿ ಹರಿಯುತ್ತಿರುವ ಸೀತಾನದಿಯ ಅಂತರ ಕೇವಲ ಎಪ್ಪತ್ತೇಳು ಹೆಜ್ಜೆಗಳು 












ಈ ಕಾಟೇಜಿನಲ್ಲಿ ಉಳಿಯಲು ವ್ಯವಸ್ತೆ ಆಗಿತ್ತು ಆದರೆ ಹಿಂದಿನದಿನ ಮೆಟ್ಟಿಲಿನವರೆಗೂ ನದಿಯ ಪ್ರವಾಹವಿದ್ದಿದ್ದರಿಂದ ದಾರ್ಮಿಟರಿಯಲ್ಲೇ ಉಳಿಯುವ ನಿರ್ಧಾರ ಮಾಡಬೇಕಾಯಿತು.






  

 






ಕಳೆಗುಂದಿದ ಮರ-ಗಿಡಗಳಿಗೆ ಜೀವಕಳೆ ತುಂಬುವಲ್ಲಿ ಮುಂಗಾರು ಮಳೆಯ ಪಾತ್ರ ಬಹುದೊಡ್ಡದು, ಮರಗಳಿಂದ ಉದುರಿದ ಬೀಜಗಳು ಭೂಗರ್ಭ ಸೇರಲು ಹಾತೊರೆಯುವ ಸಮಯವೂ ಹೌದು. 
 



   












 









ನಾವು ಅವಳಿಗಳು

























































ರಾತ್ರಿಯೆಲ್ಲಾ ಶಬ್ದ ಮಾಡುತ್ತಾ ಕಾಡಿನ ಮೌನ ಮುರಿಯುವ ಸಿಕಾಡ ಎಂಬ ಕೀಟ.






ನಾನು ದೀಪಾವಳಿಯ ಭೂಚಕ್ರವಲ್ಲಾ, ಸಹಸ್ರಪದಿ.
















































  












  























ಆಗುಂಬೆ ಸನ್ ಸೆಟ್ ವ್ಯೂ ಪಾಯಿಂಟ್ ಹತ್ತಿರ
ಈ ಚಿತ್ರದ ಕೃಪೆ ಹೆಚ್.ಸತೀಶ್
























                                                                    ಆಗುಂಬೆ ಕಾಡು











                                         ಕುಂದಾದ್ರಿ ಬೆಟ್ಟ


















ಯಾರ್ ಹೇಳಿದ್ದು ನಾವು ಅಡ್ವಾನ್ಸ್ ಇಲ್ಲ ಅಂತ ನೋಡಿ ಇಲ್ಲಿರೋ ಬೋರ್ಡು. ತ್ರೀಡೀ ಕನ್ನಡಕ ಹಾಕೇ ಓದಬೇಕು.

            ಇಲ್ಲಂದ ಎಡಕ್ಕೆ ಶ್ರುಂಗೇರಿ, ಬಲಕ್ಕೆ ಜೋಗಿಗುಂಡಿ ಬರ್ಕಣ ಫಾಲ್ಸ್ 







                                                 ಜೋಗಿಗುಂಡಿ ಜಲಪಾತ


















                                                           ಆಗುಂಬೆ ಊರೊಲ್ಲೊಂದು ಸುತ್ತು










         ದಿವಾನ್ ಪೂರ್ಣಯ್ಯ ಅವರ ಕಾಲದಲ್ಲಿ ಕಟ್ಟಿಸಿದ ಬೃಹತ್ ಛತ್ರ











     ಹೋಗಿದ್ದವರು ನಾವು ಮೂವರು ಸತೀಶ್,ಅರ್ಜುನ್ ಮತ್ತು ನಿಮ್ಮ ಪ್ರೀತಿಯ





                                                            ಹೀಗಿತ್ತು ನನ್ನ ಅವತಾರ






ಈಗ ಊಟದ ಸಮಯ
* ತೀರ್ಥಹಳ್ಳಿ ಹೋಟೆಲ್ ನಲ್ಲಿ ತಿಂದ ತಿಂಡಿಗಳಲ್ಲಿ 'ಬನ್ಸ್' ಕ್ಲಾಸ್ ಒನ್


ಕಸ್ತೂರಿ ಅಕ್ಕನ ಮನೆಯಲ್ಲಿ ರಾತ್ರಿ ಊಟಕ್ಕೆ
* ಪೈನಾಪೆಲ್ ಗೊಜ್ಜು (ಗಸಿ ಅಂತ ಅಲ್ಲಿನ ಹೆಸರು)
* ನುಗ್ಗೆಕಾಯಿ ಪಲ್ಯ (ಅವರಿಟ್ಟ ಹೆಸರು ನುಗ್ಗೆಕಾಯಿ ಹೈಜಂಪ್ )
* ಮಡಹಾಗಲ,ಕಾಡುತೊಂಡೆ,ಆಲೂಗೆಡ್ಡೆ ಪಲ್ಯ (ಸುಕ್ಕೆ)
* ಆಲೂಗೆಡ್ಡೆ ಗಂಜಿ ಪಲ್ಯ
* ಎಲೆಕೋಸು, ಕಡಲೆಕಾಳು ಸುಕ್ಕ
* ರತ್ನ ಚೂಡಿ ಅಕ್ಕಿಯ ಅನ್ನ
* ಅಕ್ಕಿ, ಈರುಳ್ಳಿ ಸಂಡಿಗೆ
* ಹುರುಳಿ ಬೇಯಿಸಿ ತೆಗೆದ ಕಟ್ಟಿನ ಸಾರು
* ಬೇಳೇ ತೊವ್ವೆ.

ಮರುದಿನ ಬೆಳಗ್ಗೆ
* ರತ್ನ ಚೂಡಿ ಅಕ್ಕಿ, ಮೆಂತ್ಯ, ಅವಲಕ್ಕಿ ಯ ದೋಸೆ,
* ಕೊಬ್ಬರಿ,ಹಸಿಮೆಣಸು, ಅಮಟೆಕಾಯಿ ಹಾಕಿ ಮಾಡಿದ ಚಟ್ನಿ.
ಮಧ್ಯಾಹ್ನ
* ಕಾಡು ತೊಂಡೆ ಅಥವಾ ಗೊಮ್ಮಟೇ ಕಾಯಿ  ಚಟ್ನಿ (ಅನ್ನಕ್ಕೆ ಚಟ್ನಿ ಕೊಬ್ಬರಿ ಎಣ್ಣೆ ಹಾಕಿ ಕಲಸಿ ತಿಂದರೆ ಆ ........................................ಹಾ).
* ಮಾವಿನಕಾಯಿ ಸಾಸಿವೆ. ಹಸಿಮೆಣಸು,ಹುರಿದ ಸಾಸಿವೆ ತೆಂಗು ರುಬ್ಬಿ         ಕೊನೆಯಲ್ಲಿ ಮಾವಿನಕಾಯಿ ಹೋಳು ಹಾಕಿ ರುಬ್ಬಿ ಒಗ್ಗರಣೆ.
* ಮಡ ಹಾಗಲ, ಆಲೂಗೆಡ್ಡೆ ಸುಕ್ಕ.
* ಕಾಯಿ ಹಲಸಿನ ತೊಳೆಯ ಉಪ್ಕರಿ.
* ಬಿದಿರು ಕಳಲೆ,ಮೊಳಕೆ ಹೆಸರುಕಾಳಿನ ಗಸಿ.
* ರತ್ನ ಚೂಡಿ ಅಕ್ಕಿಯ ಅನ್ನ.
* ನುಗ್ಗೆ,ಹುರಳಿಕಾಯಿ,ಅಲೂಗೆಡ್ಡೆ ,ಮಡ ಹಾಗಲ,ಗೊಮ್ಮಟೇ ಕಾಯಿ ಕೂಟು.
* ಇಂಗಿನ ತಂಬುಳಿ.ಒಣ ಮೆಣಸು,ಅಮಟೆಕಾಯಿ ರುಬ್ಬಿ ಇಂಗಿನ ನೀರು ಸೇರಿಸಿ    ಸಾಸಿವೆ ಒಗ್ಗರಣೆ ಕೊಟ್ಟರೆ ರೆಡಿ.  
* ಅಕ್ಕಿ,ಆಲೂಗೆಡ್ಡೆ ಹಪ್ಪಳ.

 * ಆಗ್ಗಾಗ್ಗೆ ಬಿಸಿಬಿಸಿ ಕಷಾಯ


  ಹಣವೇ ಪ್ರದಾನವಾಗಿರುವ ಈ ಕಾಲದಲ್ಲಿ ಅತಿಥಿ ಸತ್ಕಾರ ಅಂದರೆ ಏನು, ಹೇಗೆ ಎನ್ನುವುದು ಕಣ್ಣಾರೆ ನೋಡಿ ತಿಳಿಯಬೇಕಿದ್ದರೆ ಕಸ್ತೂರಿ ಅಕ್ಕನ ಮನೆಯಲ್ಲಿ ಇದ್ದು  ನೋಡಿ ಬರಬೇಕು.

-ಕ. ಶ್ರೀ. ವೆಂಕಟೇಶ ಮೂರ್ತಿ.

21 comments:

Sharda said...

wow very beautiful place, where is it , n how we can go, really i also want to go if i can.

Arjun Haarith said...

Wow , Such a nice experience it was. All the pictures are amazing. ಕಸ್ತೂರಿ ಅಕ್ಕನವರ ಮನೆಯ ಅಡುಗೆ ಅಮೋಘ ಮತ್ತು ಅದ್ಭುತ,ನೀವು ಬರೆದಿರುವ ಶೈಲಿ ಬಹಳ ಚೆನ್ನಾಗಿದೆ.
ಧನ್ಯವಾದಗಳು,
ಅರ್ಜುನ್

Unknown said...

Hey put in english cant get what it is

mahesh kumar said...

hi, Venkatesh Murthy great great and fabulous photos It calls for lot of patience, passion and perfection and perseverance to comeout with such photos and to upload and share it amongst us through the social networking site.. May God Bless you and your family which is of great support to you in this aspect, without which it's impossible to come out with things of this sort.Lots of photos this time.. and one more highlight this time is your photo in the blog..great..great keep it up.....

H.Satish said...

ಬಡ್ಡಿ ಮಗಂದು , ಏನ್ ಜಾಗ ರೀ ಅದು ! ಏನ್ ಮಳೆ, ಏನ್ ಕಾಡು, ಏನ್ ಹವಾಗುಣ , ಏನ್ ಊಟ ಆಹಾ........ !! ಇನ್ನೂ ಮರ್ತೆ ಇಲ್ಲ ಕಣ್ರೀ. ಕಾಲು ಕೆರೆದರೆ, ಲೀಚ್ ಗ್ನಾಪಕವಾಗುತ್ತೆ . ಕೆರೆದರೂ ಒಂಥರಾ ಸುಖ ಕೊಡುತ್ತೆ ! ಅಬ್ಬ ! ಆ ಸೀತ ನದಿ ತುಂಬಿ ಹರಿಯುವ ಸೊಬಗು, ಮಳೆಯಲ್ಲಿ ತೋಯ್ದು ತೊಪ್ಪೆಯಾಗಿ , ಲೀಚ್ ಗಳನ್ನೂ ಕಿತ್ತು ಒಗೆಯುವ ಕೆಲಸ , ಎಲ್ಲ ನೆನಿಸಿಕೊಂದ್ರೆ ಮೈ ಎಲ್ಲ ರೋಮಾಂಚನ ವಾಗುತ್ತೆ . ಸೀತ ನದಿ ಮತ್ತು ಕಸ್ತುರಕ್ಕನ ಮನೆಯಲ್ಲಿ ತಿಂದ ಊಟ, ನೆನಿಸಿ ಕೊಂಡರೆ ನಾಳೆಯೇ ಹೋಗೋಣ ಎನಿಸುತ್ತೆ. ನಿಮ್ಮೆಲ್ಲರ ಕಂಪನಿ ತುಂಬ ಚೆನ್ನಾಗಿತ್ತು . ಮಲೆನಾಡಿನ ಮುಂಗಾರು ಮಳೆ ನೋಡುವುದೇ ಒಂದು ಅನುಭವ. ಇವನೆಲ್ಲಾ ಹೇಳುವ ಬದಲು ಅನುಭವಿಸಿಯೇ ಸುಖಿಸ ಬೇಕು . ನಿಮ್ಮ ಚಿತ್ರ ಹಾಗು ಬರಹ ಚೆನ್ನಾಗಿ ಮೂಡಿಬಂದಿದೆ .
ನಿಮ್ಮವನೇ ಆದ ,
ಸತೀಶ್

H.Satish said...

ಇನ್ನೊಂದು ಏನ್ ಮಜಾ ಗೊತ್ತ ವೆಂಕಿ , ನನ್ನ ಕೈ ಬೆರಳು ಗಳೆಲ್ಲ ಉದ್ದ ಉದ್ದ ಆಗಿದೆ. ಏನೂ ಕೀಟ ಕಚ್ಹಿರಬಹುದು ಎಂದು ಕೊಂಡೆ , ಆದರೆ ಅದಲ್ಲ ಕಣ್ರೀ , ಕಸ್ತೂರಕ್ಕನ ಮನೆಯಲ್ಲಿ ಪೈನಾಪೆಲ್ ಗೊಜ್ಜು , ಹಾಗು ಮಾವಿನ ಸಾಸಿವೆ ತಿಂದು, ಕೈ ಚೀಪಿದಕ್ಕೆ ಬೆರಳೆಲ್ಲ ಉದ್ದ ಆಗಿವೆ.

D R NAGARAJ said...

Enchanting Photos, Mast Majaa Odataa, Hottee Thumba Ghanavada Oota.. Nivu Bengalurige Yake Barthira Venkatesh?? Alle iddu Bidi.

Felt as thoiugh we were enjoying all those dreamy moments. Thanks for sharing such beautiful experiences.

D.R.NAGARAJ (Park)

Raj Pawan said...

Great Photos Venky sir! And great narration too, loved it! Tumba chennagide.

chandru said...

Venkatesh, Very nice blog one can have on the spot feeling going through your images and words, thumba channagide. Wish I too could come, the dormitory looks very inviting, well maintained. On the whole good blog and pictures.

Regards,
Chandrashekar.

Gonchalu.......... said...

Beautiful Pictures.... Which is the Camera you use?

A.G.Laksminarayan said...

Fine blog, enjoyed the rainy images of Agumbe.

Raviprakash SS said...

Superb agide.. Chayachitragalu mathu baraha..

Santosh Bs said...

ಸಕ್ಕತಾಗಿಧೆ ರಾಯರೇ, ಮಲೆನಾಡಿನ ಅನುಭವಾನೆ ಅನುಭವ, ಖುಷಿ ಆಯಿತು ಇದನ್ನ ಓಧಿ!

Anonymous said...

sooper sir.....kaNNige habba....

AKUVA said...

ಜೂನ್ ೨೦೧೧ ರಲ್ಲಿ ನಾವು ಕೂಡ ಆಗುಂಬೆ ಘಾಟಿಯಲ್ಲಿ ತುಂಬಾ ಮಜಾ ಮಾಡಿದ್ದಿನೆ. ಅದ್ಭುತ ಕ್ಯಾಮೆರಾ ....ಕೆಲಸ .......ಮನ ತುಂಬಿ ಹೋಯ್ತು ...ಧನ್ಯವಾದಗಳು

Sukhesh said...

ಫೋಟೋಗಳು ಸೂಪರ್ :)
ಆದ್ರೆ ಊಟದ್ದೆಲ್ಲ details ಕೊಟ್ಟು ಹೊಟ್ಟೆ ಉರಿಸ್ಬೇಡಿ :)

shekhar said...

nimma soundarya prajnege namma namanagalu

ಮುರಳಿ said...

ಎಂಥಾ ಅನುಭವ, ಮೈ ಜುಂ ಎನಿಸುವ ಮಳೆ, ಚಳಿ, ಜಿಗಣೆ, ಊಟ, ಒಗ್ಗರಣೆ..... ಅಮೋಘ ಚಿತ್ರಗಳು ಓದುವುದಕ್ಕೆ ಮಜವೊ ಮಜಾ.....

Sachin Shid said...

sooper pics sir..

Unknown said...

Very nice navigation about male nadu

Unknown said...

Very nice navigation

Total Pageviews