Sunday, August 21, 2011

ಶ್ರೀ ಧರ್ಮ ಜಾರಂದಾಯ


ಭೂತಾರಾಧನೆ ತುಳುನಾಡಿನ ಮುಖ್ಯ ಆರಾಧನೆಗಳಲ್ಲಿ ಒಂದು.        ಕೋಲ, ಬಂಡಿಜಾತ್ರೆ, ನೇಮ, ಕೆಂಡಸೇವೆ, ಮೈಮೆ, ಮೆಚ್ಚಿ, ಜಾಲಾಟ ಇವು ವಿವಿಧ ಪ್ರಕಾರಗಳು.ಶಾಸನಗಳಲ್ಲಿ ಹದಿನಾಲ್ಕನೇ  ಶತಮಾನದಿಂದ ಈಚೆಗೆ 'ಭೂತ'ದ ಬದಲಿಗೆ 'ದೈವ'ಎಂಬ ಪದವೇ ಬಳಕೆಯಲ್ಲಿರುವುದು ಉಲ್ಲೇಖನೀಯ.
ಈಗ ನಾನು ನೋಡಿಬಂದ  'ಧರ್ಮ ಜಾರಂದಾಯ' ಎಂಬ ದೈವದ 'ಕೋಲ'ದ ಬಗ್ಗೆ ಸ್ವಲ್ಪ ಮಾಹಿತಿ. 

 ತುಳುನಾಡಿನಲ್ಲಿ ಉಡುಪಿಯಿಂದ ಆಗ್ನೇಯಕ್ಕೆ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತಾರಗೊಳಿಸಿ ಮೆರೆದ ದೈವ 'ಜಾರಂದಾಯ' ರಾಜ್ಯದ ಗಡಿಕಾಯುವ ತನ್ನ ಅಧೀನಕ್ಕೊಳಗಾದ ಭಕ್ತರನ್ನು ರಕ್ಷಿಸುವ ಹೊಣೆಗಾರಿಕೆ ಈ ದೈವದ್ದು. ಜುಮಾದಿ, ಪಂಜುರ್ಲಿ, ಪಿಲ್ಚಂಡಿ, ಬಬ್ಬಯ್ಯ, ಕೊಡಮಂದಾಯ, ಕುಕ್ಕಿನಂದಾಯ ಮೊದಲಾದ ದೈವಗಳಿಗೆ ಈ ಪಟ್ಟ ಸೀಮಿತ. ತುಳುನಾಡಿನ ಪೂರ್ವ ಸಂಪ್ರದಾಯದಂತೆ ಮನೆತನದ 'ಆದಿದೈವ'ನಾಗಿ ನಂಬಿದ ಸಂಸಾರವನ್ನು ಕಾಯುವ ಜವಾಬ್ಧಾರಿ ಜಾರಂದಾಯನಿಗಿದೆ.ದೈವಾರಾಧನೆ ತುಳುವರ ಬದುಕಿನ ಅವಿಭಾಜ್ಯ ಅಂಗ.


 'ಧರ್ಮ ಜಾರಂದಾಯ'.


ಕೈಲಾಸದಲ್ಲಿ ಶಿವನು ಧ್ಯಾನ ಮಾಡುತ್ತಿದ್ದ ಸಂದರ್ಭದಲ್ಲಿ ದಾನವರಿಂದ ತಪಸ್ಸಿಗೆ ಭಂಗವಾಯಿತು, ಆಗ ಕೋಪಗೊಂಡ ಶಿವನು ತನ್ನ ನೀಳವಾದ ಜಡೆಯನ್ನು ಕೊಡುವಿದಾಗ ಉದ್ಭವವಾದವನೇ ವೀರಭದ್ರ. ವೀರಭದ್ರನ ಭಯಾನಕ ರೂಪವನ್ನು ಕಂಡು ರಾಕ್ಷಸರು ಪ್ರಾಣಭಯದಿಂದ ಕಂಡ ಕಂಡಲ್ಲಿಗೆ ಓಡಿದರು. ಶಿವನು ವೀರಭದ್ರನಿಗೆ ಕೋಪವನ್ನು ಬಿಟ್ಟು ಶಾಂತನಾಗಿ ಭೂಲೋಕದಲ್ಲಿ 'ಧರ್ಮ ಜಾರಂದಾಯ' ಎಂಬ ಹೆಸರಿನಲ್ಲಿ ಧರ್ಮದಿಂದ ಬದುಕುತ್ತಿರುವ ಭಕ್ತರನ್ನು ಕಾಪಾಡಿಕೊಂಡಿರುವಂತೆ ಅನುಗ್ರಹಿಸಿದರು.
ಜಾರಂದಾಯ ದೈವದ ಹುಟ್ಟು ಮತ್ತು ಕಾರ್ಯಕ್ಷೇತ್ರ ಮಂಗಳೂರು ತಾಲ್ಲೂಕಿನಿಂದ ಉತ್ತರಕ್ಕೆ ಮುಲ್ಕಿ,ಕಾಪು,ಕಟಪಾಡಿ ಮತ್ತು ಪೂರ್ವಕ್ಕೆ ಶಿರ್ವ ಮಂಚಕ್ಕಲ್ ವರೆಗೆ.

ಕೋಲ.

ದೈವಾರಧನೆಗೆ 'ಕೋಲ' ಕಟ್ಟುವುದು ಎಂಬ ಪದದ ಬಳಕೆಯೂ ಇದೆ.  ಕೋಲ,ದೈವಾರಧನೆಯ ಪ್ರದರ್ಶನ.  ಕಲಾವಿದರು ಇಲ್ಲಿ ದೈವವನ್ನು ವೇಷಗಾರಿಕೆ ಮೂಲಕ ಆವಾಹಿಸಿಕೊಂಡು ಪ್ರತ್ಯಕ್ಷಗೊಳಿಸುತ್ತಾರೆ. ಒಂದು ನಿರ್ಧಿಷ್ಟ ಸ್ಥಳ, ಕಾಲ, ಸಾಮಾಜಿಕ, ಧಾರ್ಮಿಕ ಪರಿಸರದಲ್ಲಿ ವೇಷಭೂಷಣ ,ಪಾರಂಪರಿಕ ನಂಬಿಕೆ, ಮಡಿ-ಮೈಲಿಗೆ ಮೂಲಕ ಹಂತ ಹಂತವಾಗಿ ಕಾಣದ ಶಕ್ತಿಯನ್ನು ಕಣ್ಣಿಗೆ ಕಾಣಿಸುವಂತೆ ಮಾಡುವುದು. ಅದು ಯಕ್ಷಗಾನದಂತೆ      ಪಾತ್ರಧಾರಣೆಯಲ್ಲ, ಬದಲಾಗಿ ಪಾತ್ರೀಕರಣ.ಇತರೆ ಕಲೆಗಳಲ್ಲಿ ಕಲಾವಿದರು ಮತ್ತು ಪಾತ್ರಕ್ಕೆ ನಿರ್ದಿಷ್ಟವಾದ ಅಂತರ ಇದ್ದರೆ ದೈವಾರಾದನೆಯಲ್ಲಿ ಕಲಾವಿದ ಮತ್ತು ಆ ಪಾತ್ರಕ್ಕೆ ವ್ಯತ್ಯಾಸವೇ ಇಲ್ಲ. ಜಾರಂದಾಯ ದೈವದ ಜೊತೆಗೆ 'ಬಾಯಿಬಾರದ' ಬಂಟ ಎಂಬ ದೈವ ಶಕ್ತಿಗೂ ಆರಾಧನೆ ನಡೆಯುತ್ತದೆ.
ಜಾರಂದಾಯನಿಗೆ ಪಸರ್ನೆ, ತಂಬಿಲ, ವರ್ಷಾವಧಿ ಕೋಲ ಮೊದಲಾದ ಸೇವೆಗಳು ನಡೆಯುವುದು.ಈ ಸಮಯದಲ್ಲಿ ತೆಂಗಿನಕಾಯಿಯನ್ನು ದೈವ ಆವಾಹನೆಗೆಗಾಗಿ ಮಣೆಮಂಚದಲ್ಲಿರಿಸುವುದು  ಸಂಪ್ರದಾಯ.          
 ಇದು ರಕ್ತಾಹಾರ ಸ್ವೀಕಾರ ಮಾಡುವ ದೈವಶಕ್ತಿ. ಕೋಲದ ಸಂದರ್ಭದಲ್ಲಿ ಪಂಚಕಜ್ಜಾಯ, ದೋಸೆ, ಕಡುಬು, ಶಾವಿಗೆಯನ್ನು  ಸಮರ್ಪಿಸಿವರು. ತುಳುನಾಡಿನಲ್ಲಿ ಬಿಲ್ಲವರು, ಬಂಟರು, ಜೈನರು  ಜಾರಂದಾಯನ ಆರಾಧಕರು.







ಕೋಲದ ದಿನ ಬೆಳಗ್ಗೆ 


 ಎಳೇ ತೆಂಗಿನ ಗರಿಗಳಿಂದ ವೇಷಭೂಷಣ ತಯಾರಿ.



ಕೋಲ ನಡೆದ ಸ್ಥಳ ಮಂಗಳೂರು ಉಡುಪಿ ರಸ್ತೆ ಯಲ್ಲಿ ಪದುಬಿದ್ರಿಯಿಂದ
ಬಲಕ್ಕೆ ನಂದಿಕೂರು, ಮದಿರಂಗಡಿ ಮಾರ್ಗವಾಗಿ ಶಿರ್ವ ಅಥವಾ ಮಂಚಕ್ಕಲ್  ಹತ್ತಿರ  ಕುತ್ಯಾರು ಗ್ರಾಮ ಪಂಚಾಯತಿಯ ಬಗ್ಗತೋಟ ಎಂಬಲ್ಲಿ.

ದೈವಸ್ತಾನ.





ಕೋಲ ನಡೆಯುವ ಮಂಟಪ.





ಶಹನಾಯಿ ವಾದಕರು ಹಳೇ ಹಿಂದಿ ಚಿತ್ರ ಗೀತೆಗಳನ್ನು ಜಾರಂದಾಯನ ಬಾಲ್ಯ, ಯೌವನಕ್ಕೆ ತಕ್ಕಂತೆ ಅಳವಡಿಸಿಕೊಂಡು  ನುಡಿಸುತ್ತಾರೆ. ಆ ತಾಳಕ್ಕೆ ಕೋಲದ ವೇಷದಾರಿಗಳು ನರ್ತಿಸುತ್ತಾರೆ, ರಾತ್ರಿ ಸುಮಾರು ಹತ್ತು ಗಂಟೆಯಿಂದ ಮರುದಿನ ಬೆಳಗ್ಗೆ ಆರು ಗಂಟೆಯವರೆಗೆ. 





ಕೋಲದ ವೇಷ ಧರಿಸಿ ಕುಣಿಯುವ ಪಾತ್ರಧಾರಿಗಳು ನಲಿಕೆ, ಪರವ, ಪಂಬದ ಜನಾಂಗದವರೇ ಆಗಿರುತ್ತಾರೆ.








ಇಲ್ಲಿ ದೈವಕ್ಕೆ ಬಿಲ್ಲವರು ದರ್ಶನಾವೇಶದ ಪಾತ್ರಿಗಳಾಗಿರುತ್ತಾರೆ.




'ಗಗ್ಗರ' ಕಟ್ಟಿ ಕೊಳ್ಳುವುದಕ್ಕೆ ಮುಂಚೆ ಕಲಾವಿದರು  ಅಲ್ಲಿ ನೆರೆದಿರುವ ಎಲ್ಲರ ಅನುಮತಿ ಕೇಳುತ್ತಾರೆ.



 
.
















 









ದೈವಕ್ಕೆ ಆವೇಶ ಬಂದು ಅಟ್ಟಹಾಸದಿಂದ ಕುಣಿದಾಡುತ್ತದೆ ನಂತರ ಡೀವಿಟಿಗೆಯಿಂದ ಸುಟ್ಟುಕೊಳ್ಳುವುದೇ  ಮುಂತಾದ ಭಂಗಿ, ಮುಖಭಾವ ಪ್ರದರ್ಶಿಸುತ್ತದೆ.



 

















ಮುಂದೆ ಮುಖವಾಡ ಧರಿಸಿ  ಆಯುಧಗಳಿಗೆ ನಮಸ್ಕರಿಸಿ ಕೈಯಲ್ಲಿ ಹಿಡಿದು ನರ್ತಿಸಿ ಖಡ್ಗ ಮತ್ತು ಗಂಟೆಯನ್ನು  ಭಕ್ತರ ಕೈಗೆ ಮುಟ್ಟಿಸಿ ರಕ್ಷಣೆಯ ಭರವಸೆ ನೀಡುತ್ತದೆ.ಆಯುಧಗಳನ್ನು ಕೆಳಗಿಟ್ಟ ಮೇಲೆ ಆವೇಶ ನಿಲ್ಲುತ್ತದೆ.





-ಕ.ಶ್ರೀ.ವೆಂಕಟೇಶ ಮೂರ್ತಿ.



































     


2 comments:

H.Satish said...

ಪ್ರಿಯ ವೆಂಕಟೇಶ್ ರವರೆ ,
ನಿಮ್ಮ ಭೂತ , ಅರ್ಥಾತ್ ಭೂತದ ಕುಣಿತ ತುಂಬಾ ಚೆನ್ನಾಗಿದೆ . ಛಾಯ ಚಿತ್ರಗಳು ಮನಸೆಳದಿವೆ. ನಿಮ್ಮ ಬ್ಲಾಗ್ ನಲ್ಲಿ ಮೊದಲನೇ ಸಲ ವೀಡಿಯೊ ಚಿತ್ರಣ ನೋಡಿ ಸಂತೋಷ ವಾಯಿತು. ನೀವು ಇದೆ ಬರಹ ವನ್ನು ಸುಧಾ ವಾರ ಪತ್ರಿಕೆಗೆ ಕೊಟ್ಟರೆ ಇನ್ನು ಹಲವಾರು ಕನ್ನಡಿಗರು ಓದಿ
ಆನಂದಿಸಬಹುದು ಎಂದು ನನ್ನ ಸಣ್ಣ ಅನಿಸಿಕೆ.
ಒಂದರ ನಂತರ ಇನ್ನೊಂದು ಬರಹಗಳು ಚೆನ್ನಗಿ ಮೂಡಿಬರುತ್ತಿರುವುದು ಸಂತೋಷದ ವಿಷಯ.
ನಿಮ್ಮ ಮುಂದಿನ "ರಾಯರ ಆರಾಧನೆ" ಗೋಸ್ಕರ ಕಾಯುತ್ತಲಿರುವ ನಿಮ್ಮವನೇ ಆದ ,
ಸತೀಶ್

Anonymous said...

ಅಣ್ಣ,ತುಂಬಾ ಸೂಪರ್ ಆಗಿ ಅರ್ಥವಾಗುತ್ತೆ .ಫೋಟೋ ಸಮೇತ ಹಾಕಿರುವ ಮಾಹಿತಿ ಎಲ್ಲರಿಗೂ ಮನಮುಟ್ಟುವಂತಿದೆ.

Total Pageviews