Friday, September 02, 2011

ರಾಯರ ಆರಾಧನೆ. 340th Aradhana of Shri Raghavendra Teertharu at MANTRALAYA





ಶ್ರೀ ಗುರುಸಾರ್ವಭೌಮರ ೩೪೦ನೇ ಅರಾಧನೆಯ ವಿಶೇಷ

ರಾಘವೇಂದ್ರರ ಬೃಂದಾವನ

ಋಷಿ ಪ್ರಭಾಕರ್ ರವರ ಸಿದ್ದ ಸಮಾಧಿ ಯೋಗದ ಸಾಧಕರು ಸುಮಾರು ಒಂಬತ್ತು ವರ್ಷದಿಂದ ಮಂತ್ರಾಲಯದಲ್ಲಿ ಆರಾಧನೆ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಸೇವೆಸಲ್ಲಿಸುತ್ತಾ ಬರುತ್ತಿದ್ದಾರೆ. ಈ ಸಲ ನಮಗೂ ಆ ಅವಕಾಶ ಸಿಕ್ಕಿತ್ತು.(ಅಪ್ಪ ಅಮ್ಮ  ನಾನು ನನ್ನ ಹೆಂಡತಿ) ಸುಮಾರು ಎರಡುಸಾವಿರ ಜನ ದಕ್ಷಿಣ ಭಾರತದಿಂದ. ಅಡುಗೆ,ಊಟ ಬಡಿಸುವುದು.ಸ್ವಚ್ಛ ಮಾಡುವುದು,ದೇವಸ್ಥಾನದಲ್ಲಿ  ಸಾಲು ನಿರ್ವಹಿಸುವುದು ಮುಂತಾದ ಕೆಲಸ. ಸ್ವಾಮಿಕಾರ್ಯ ಸ್ವಕಾರ್ಯ ಅಂತಾರಲ್ಲ ಹಾಗೆ ಸಮಯ ಮಾಡಿಕೊಂಡು ತೆಗೆದ ಒಂದಷ್ಟು ಫೋಟೋಗಳಿವೆ ನೋಡಿ.

ರಾಘವೇಂದ್ರರ ಬೃಂದಾವನ ಪೂರ್ವಾರಾಧನೆ ದಿನದಂದು .
14-8-2011


                                                          
ಮಧ್ಯಾರಾಧನೆ ದಿನದ ವೀಡಿಯೋ ಕ್ಲಿಪ್ಪಿಂಗ್.  







ಉತ್ತರಾರಾಧನೆ ದಿನ ಬೃಂದಾವನಕ್ಕೆ ಅಭಿಷೇಕದ ವೀಡಿಯೋ ಕ್ಲಿಪ್ಪಿಂಗ್.16-8-2011



 
ಸುಯತೀಂದ್ರತೀರ್ಥ ಶ್ರೀಗಳಿಂದ ಮಹಾ ಮಂಗಳಾರತಿ.




 ಅಭಿಷೇಕದ ನಂತರ ಅಲಂಕಾರ.16-8-2011.




ಸುಯತೀಂದ್ರತೀರ್ಥ ಶ್ರೀಪಾದಂಗಳು.








                                                                ಉಯ್ಯಾಲೋತ್ಸವ




ಸಾಂಸ್ಕ್ರುತಿಕ ಕಾರ್ಯಕ್ರಮಗಳು












 ಪ್ರಹ್ಲಾದ ರಾಜರಿಗೆ ಪ್ರತಿ ದಿನ ರಾತ್ರಿ ಏಳು ದಿನದ ಸಪ್ತ ರಾತ್ರೋತ್ಸವ ಕಾರ್ಯಕ್ರಮದಲ್ಲಿ     ಪ್ರಾಕಾರ ಉತ್ಸವಗಳು.
 
ಸಿಂಹವಾಹನೋತ್ಸವ.










ರಜತ ಮಂಟಪೋತ್ಸವ  




                                        ರಜತ  ರಥೋತ್ಸವ 

ಸ್ವರ್ಣ ರಥೋತ್ಸವ 












        
ಮಧ್ಯಾರಾಧನೆ ದಿನದ ಬೆಳಗ್ಗೆ  





ಪ್ರಭ ಉತ್ಸವ, ಅಲಂಕೃತ ಪ್ರಭಾವಳಿಯಲ್ಲಿ ಪ್ರಹ್ಲಾದರಾಜರು.  

























ವಾದೀಂದ್ರ ಶ್ರೀಪಾದರ ಬೃಂದಾವನ.






ಆಂಜನೇಯರು



ಪ್ರಹ್ಲಾದ  ರಾಜರು. 






 ಆರಾಧನೆಯ ಅತ್ಯಂತ ರೋಮಾಂಚನದ ಕ್ಷಣವಾದ  ಮಹಾರಥೋತ್ಸವ.ಉತ್ತರಾರಾಧನೆ ದಿನ ಬೆಳಿಗ್ಗೆ ಬೃಂದಾವನದ ಮುಂದೆ ಪ್ರಹ್ಲಾದರಾಜರಿಗೆ ಪಾದಪೂಜಾದಿಗಳು ನಡೆದ ಮೇಲೆ ಪ್ರಾಕಾರದಿಂದ ಪ್ರಹ್ಲಾದರಾಜರನ್ನು ಕೂಡಿಸಿಕೊಂಡು ಹೊರಟ ಮೆರವಣಿಗೆ ಮಂಚಾಲಮ್ಮನ ದರ್ಶನ ಅಲ್ಲಿಂದ ಹೊರಟದ್ದು ಗುರುಸಾರ್ವಭೌಮ ವಿದ್ಯಾಪೀಠಕ್ಕೆ.
              ವಿದ್ಯಾಪೀಠದಲ್ಲಿ ವಸಂತ ಪೂಜೆಯ ಬಳಿಕ ಮಹಾರಥೋತ್ಸವ.










ಭಕ್ತಿಯ ವಿವಿಧ ಪ್ರಕಾರಗಳು.











ತುಂಗೆ














ಮೊದಲೆರೆಡು ದಿನ ನನಗೆ ಸಿಕ್ಕಿದ್ದು ತೀರ್ಥ,ಮಂತ್ರಾಕ್ಷತೆ ಕೊಡುವ ಕೆಲಸ.ಎಷ್ಟು ಸಾವಿರ ಜನಕ್ಕೋ. ಎಷ್ಟೊಂದು ತರಹ ಅಂಗೈಗಳು.  ಬೆಳ್ಳಗಿನ, ಗುಲಾಬಿ, ಕಪ್ಪು, ಕಂದು ಬಣ್ಣದ. ಒಂದೂವರೆ ವರ್ಷದ ಕಂದಮ್ಮನಿಂದ ತೊಂಬತ್ತು ವರ್ಷದ ಹಿರಿಯರವರೆಗಿನ,  ಬೆರಳು ತುಂಡಾದ, ನಾಲ್ಕೂಬೆರಳು ಅರ್ದ ತುಂಡಾದ, ಹೆಬ್ಬೆಟ್ಟೆ ಇಲ್ಲದ, ಆರು ಬೆರಳಿನ, ಚಾಚಲೂ ಆಗದ, ಯಾವಾಗಲೋ ಸುಟ್ಟ ಗಾಯದ, ಪ್ಲಾಸ್ಟರ್ ಹಾಕಿದ್ದ, ಮೃದುವಾದ, ಒಂದೂ ಕಲೆ ಇಲ್ಲದ, ಮೆಹಂದಿ ಹಾಕಿದ್ದ, ಬಗೆಬಗೆಯ ಉಗುರು ಬಣ್ಣ ಹಾಕಿದ್ದ, ಉಂಗುರವೇ ಇಲ್ಲದ, ನಾಲ್ಕೂ ಬೆರಳಿಗೆ ಉಂಗುರಹಾಕಿದ್ದ, ಹೊಲಗದ್ದೆಗಳಲ್ಲಿ ಕೆಲಸಮಾಡಿ ಒರಟಾದ, ಸೀಳುಬಿಟ್ಟ ಅಬ್ಬ ಅಷ್ಟು ತರಹದ  ಅಂಗೈಗಳನ್ನು ಹಿಂದೆಂದೂ ನಾನು  ನೋಡಿರಲಿಲ್ಲ.
(ಅಮ್ಮಂದಿರ ಕಂಕುಳಲ್ಲಿದ್ದ ಪುಟ್ಟ ಕಂದಮ್ಮಗಳೂ ಕೈ ಒಡ್ದುತ್ತಿದ್ದುದ್ದು ಖುಷಿ ಕೊಡುತ್ತಿದ್ದವು.) 
                                                                        

                 ನಾನೂ ತಲೇ ಮೇಲೆ ಮಂತ್ರಾಕ್ಷತೆ  ಹಾಕಿಕೊಂಡೇ....




ಕೊನೇದಿನ ಗುರೂಜಿ ಋಷಿ ಪ್ರಭಾಕರ್ ರವರಿಂದ
ಸ್ವಯಂಸೇವಕರಿಗೆ ಆಶೀರ್ವಾದ.
   

2 comments:

Arjun Haarith said...

ನಿಮ್ಮ ಬ್ಲಾಗ್ ಬಹಳ ಚೆನ್ನಾಗಿದೆ . ರಾಯರ ಆರಾಧನೆಯನ್ನು ನಮ್ಮೆಲರಿಗೂ ಕಂಪ್ಯೂಟರ್ ನಲ್ಲೆ ತೋರಿಸಿದಕ್ಕಾಗಿ ಬಹಳ ವಂದನೆಗಳು. ನಿಮ್ಮ ಫೋಟೋ ಗಳನ್ನೂ ನೋಡಿ ನಾನು ಸಹ ಮಂತ್ರಾಲಯಕ್ಕೆ ಹೋಗಿ ಬಂದಂತಿದೆ.
ದಿನವು ನಾನು " ಶ್ರೀ ಗುರು ರಾಘವೇಂದ್ರ ವೈಭವ " ಧಾರಾವಾಹಿ ನೋಡುತ್ತೇನೆ.
ಈ ದಿನ , ನಿಮ್ಮ ಬ್ಲಾಗ್ ಇಂದ ನಿಜವಾದ ವೈಭವ ವನ್ನು ನೋಡಿ ಆನಂದವಾಯಿತು.

ಧನ್ಯವಾದಗಳು,
ಅರ್ಜುನ್ ಹಾರಿತ್

H.Satish said...

ಪ್ರಿಯ ವೆಂಕಿ,
"ರಾಯರ ಆರಾಧನೆ " ಯಲ್ಲಿ ತೆಗಿದಿರುವ ಛಾಯಾ ಚಿತ್ರಗಳು ತುಂಬಾ ಚೆನ್ನಾಗಿದೆ . ನಿಮ್ಮ ಕ್ಯಾಮೆರಾ ದಲ್ಲಿ ಮೂಡಿರುವ ಚಿತ್ರಗಳ ರಂಗಿನಾಟ, ನೆರಳು ಬೆಳಕಿನ ಕೈಚಳಕ , ನಿಮ್ಮ ಕ್ರಿಯಾಶೀಲತೆಗೆ ಮೆರಗು ತಂದಿದೆ. ಈ ಅಂಕಣದಲ್ಲಿ ಇರುವ ಚಿತ್ರಗಳು ಒಂದೊಂದು ಕಥೆಯನ್ನು ಹೇಳುತ್ತಿವೆ . ನಿಮ್ಮ ಚಿತ್ರಗಳಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ . ಅಭಿನಂದನೆಗಳು,
ಇಂತಿ ನಿಮ್ಮ
ಸತೀಶ್

Total Pageviews