ಸುಮ್ಮನೆ ನೋಡಿದರೆ ನಗು ಬರಿಸುವ ಅದರ ಚೇಷ್ಟೆ ನೋಡುತ್ತಿದ್ದರೆ ಸಮಯ ಹೋಗುವುದೇ ತಿಳಿಯದ ಒಂದು ಜೀವವಿದ್ದರೆ ಅದು ಕೋತಿ ಮಾತ್ರ. ಮನಸ್ಸಿಗೆ ಸಂತೋಷ ಕೊಡುವುದು ಮಾತ್ರವಲ್ಲದೆ ಮಾಡುವ ಅನಾಹುತಗಳಿಂದ ಜನರಿಗೆ ಕಿರಿಕಿರಿ ಉಂಟು ಮಾಡಿ ಕಲ್ಲಿನಿಂದ ಹೊಡಿಸಿಕೊಳ್ಳುವುದು, ಬೋನಿಗೆ ಸಿಕ್ಕಿ ಊರಿಂದ ಗಡಿಪಾರಾಗುವುದೂ ಉಂಟು. ಅಷ್ಟೇ ವೇಗವಾಗಿ ವಾಪಸ್ ಬರುವುದೂ ಸಹ. ಅಭಿವೃದ್ದಿ ಹೆಸರಿನಲ್ಲಿ, ನೆಲಗಳ್ಳರ ಹಾವಳಿಯಿಂದ, ಕೆಲವು ರಾಜಕಾರಣಿಗಳ ದೂರ ದೃಷ್ಟಿ, ಇಚ್ಚಾಶಕ್ತಿ ಕೊರತೆಯಿಂದ, ಅರಣ್ಯ ಒತ್ತುವರಿಯಿಂದ ಕಾಡು ಸರ್ವನಾಶವಾಗಿ ಕಾಡುಪ್ರಾಣಿಗಳು ಊರಿನಕಡೆ ಗುಳೇಹೋಗುತ್ತಿವೆ ಅಂತಹದರಲ್ಲಿ ಕೋತಿಗಳೇನು ಹೊರತಲ್ಲ. ಈ ವೃಕ್ಷಸಂಬಂಧಿ ಕೋತಿಗಳು ನಗರಗಳಲ್ಲಿ ವಿದ್ಯುತ್ ಸ್ಪರ್ಶದಿಂದ, ನಾಯಿಗಳ ಆಕ್ರಮಣದಿಂದ, ರಸ್ತೆ ಅಪಘಾತಗಳಿಂದ ಅಂಗವಿಕಲವಾಗುವುದು ಮತ್ತೆ ಕೆಲವು ಜೀವ ಕಳೆದುಕೊಳ್ಳುವುದೂ ಉಂಟು. ಬೆಂಗಳೂರು ನಗರದಲ್ಲಿ ಇಂತಹ ಗಾಯಗೊಂಡ, ಅನಾಥ ವನ್ಯ ಪ್ರಾಣಿಗಳನ್ನು ಸಲಹುತ್ತಿರುವ ಸಂಸ್ಥೆ ಪೀಪಲ್ ಫಾರ್ ಅನಿಮಲ್ಸ್. ನಮ್ಮ ಮನೆಯಲ್ಲಿ ಸಿಕ್ಕ ಅಳಿಲು ಮರಿಗಳನ್ನು ಅಲ್ಲಿ ಕೊಡಲು ಹೋದಾಗ ಅವರ ಅನುಮತಿ ಪಡೆದು ಅಲ್ಲಿ ಕಂಡ ಕೆಲವು ಮನ ಕಲುಕುವ ಕೋತಿಗಳ ಫೋಟೋಗಳನ್ನು ಚಿತ್ರಿಸಿ ತಂದಿದ್ದೆ . ಅದಕ್ಕೆ ಪೂರಕವಾಗಿ ಬೇರೆಕಡೆ ತೆಗೆದ ಚಿತ್ರಗಳೂ ಇವೆ ಕೆಲವು ಖುಷಿ ಕೊಡಬಹುದು ಕೆಲವು ನೋವನ್ನೂ ಸಹ.
ಸದ್ಯಕ್ಕೆ ಹಾಲು ಸಾಕು ಫಾರ್ ಎ ಚೇಂಜ್ ಸ್ಲೈಸ್ ಕುಡೀತೀನಿ.
ತಾಯಿ ವಾತ್ಸಲ್ಯದ ಮುಂದೆ ಬೇರೆಲ್ಲ ನಗಣ್ಯ, ಅದರಲ್ಲೂ ಮಾತು ಬಾರದ ಪಶು ಪಕ್ಷಿ ಕ್ರಿಮಿ ಕೀಟಗಳಲ್ಲಿ ತುಸು ಹೆಚ್ಚೆಂದರೆ ಅತಿಶೋಕ್ತಿಯೇನಲ್ಲ. ಅಮ್ಮನಿಂದ ಮರಿಗಳು ಬೇರ್ಪಟ್ಟಾಗ ಅವುಗಳಲ್ಲಾಗುವ ಸಂಕಟ, ಮೂಕವೇದನೆ ಊಹಿಸಲು ಅಸ್ಸಾಧ್ಯ. ಈ ಕೆಳಗಿರುವ ಕೆಲವು ಚಿತ್ರಗಳನ್ನು ನೋಡಿ ತಾಯಿ ಮಗುವಿನ ಬಾಂಧವ್ಯ, ಕುಟುಂಬದ ಇತರೆ ಸದಸ್ಯರ ಜೊತೆ ಆಟ ಒಡೆನಾಟ.
ಮೂರು ಬೇರೆ ಬೇರೆ ಜಾಗದಲ್ಲಿ ತಾಯಿಯನ್ನು ಕಳೆದುಕೊಂಡ ತಬ್ಬಲಿ ಮರಿಗಳು ಈಗ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆ ಯ ಆರೈಕೆಯಲ್ಲಿ.
ಈ ಕೋತಿಗೆ ಎರಡೂ ಕೈಗಳಿಲ್ಲ ಆದರೂ ಚೇಷ್ಟೆಗೇನೂ ಕಮ್ಮಿಯಿಲ್ಲ.
ತಾಯಿ ವಾತ್ಸಲ್ಯದ ಮುಂದೆ ಬೇರೆಲ್ಲ ನಗಣ್ಯ, ಅದರಲ್ಲೂ ಮಾತು ಬಾರದ ಪಶು ಪಕ್ಷಿ ಕ್ರಿಮಿ ಕೀಟಗಳಲ್ಲಿ ತುಸು ಹೆಚ್ಚೆಂದರೆ ಅತಿಶೋಕ್ತಿಯೇನಲ್ಲ. ಅಮ್ಮನಿಂದ ಮರಿಗಳು ಬೇರ್ಪಟ್ಟಾಗ ಅವುಗಳಲ್ಲಾಗುವ ಸಂಕಟ, ಮೂಕವೇದನೆ ಊಹಿಸಲು ಅಸ್ಸಾಧ್ಯ. ಈ ಕೆಳಗಿರುವ ಕೆಲವು ಚಿತ್ರಗಳನ್ನು ನೋಡಿ ತಾಯಿ ಮಗುವಿನ ಬಾಂಧವ್ಯ, ಕುಟುಂಬದ ಇತರೆ ಸದಸ್ಯರ ಜೊತೆ ಆಟ ಒಡೆನಾಟ.
ಈ ತಾಯಿ ಮತ್ತು ಮರಿಯ ವಿಡಿಯೋ ಕ್ಲಿಪ್ ನೋಡಿ, ಅಲ್ಲಿಗೆ ಬಂದ ಮತ್ತೊಂದು ಅಮ್ಮ ಮಗುವನ್ನು ಸ್ವಾಗತಿಸಿದ ಬಗೆ, ಪರಸ್ಪರ ಮುತ್ತುಗಳ ವಿನಿಮಯ. ಮೊದಲು ಮರಿಯನ್ನು ಎಳೆದುಕೊಂಡು ಬೆನ್ನಿಗೊಂದು ಮುತ್ತು ನಂತರ ಅದರ ಅಮ್ಮನಿಗೊಂದು . ಅದೇ ರೀತಿ ಬಂದ ಕೋತಿಯೂ ಮಾಡಿದ್ದು ಗಮನಿಸಿ.
ಸದಾ ಅಮ್ಮನ ಮಡಿಲಿನಲ್ಲಿ ಬೆಚ್ಚಗೆ ಮಲಗಿ ಬೇಕೆಂದಾಗಲೆಲ್ಲಾ ಮೊಲೆಯ ತೊಟ್ಟನ್ನು ಚೀಪುತ್ತಾ ತಾಯಿ ಸುಖವನ್ನು ಅನುಭವಿಸಬೇಕಾಗಿದ್ದ ಪುಟ್ಟ ಕಂದಮ್ಮಗಳು ತಮ್ಮ ಬೆರಳನ್ನೇ ಚೀಪುತ್ತಿರುವುದು ಎಂತ ಕರುಳು ಹಿಂಡುವ ಸಂಗತಿ.
ಇದಕ್ಕಿರುವುದು ಬಲಗಾಲಿನ ಒಂದು ಪಾದ ಮಾತ್ರ, ಮರದಿಂದ ಮರಕ್ಕೆ ಹಾರಿ ಸಿಕ್ಕಿದ್ದೆಲ್ಲಾ ತಿಂದು ಸುಖವಾಗಿರಬೇಕಾಗಿದ್ದ ಇದು ಜೀವನಪರ್ಯಂತ ಮರವೇ ಹತ್ತಲಾಗದ ಸ್ಥಿತಿ.
ಕೊನೆಯದಾಗಿ.
ನಿಮಗೇನಾದರೂ ಗಾಯಗೊಂಡ, ಅನಾಥ, ಬಲವಂತವಾಗಿ ಕೂಡಿಹಾಕಿರುವ ಕಾಡು ಪ್ರಾಣಿಗಳೇನಾದರೂ ಕಂಡು ಬಂದರೆ ಕೂಡಲೇ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಗೆ ತಿಳಿಸಿ. ಸಾಧ್ಯವಾದಷ್ಟು ಧನ ಸಹಾಯ ಮಾಡಿ ಅನಾಥ ಪ್ರಾಣಿಗಳ ಆರೈಕೆಗೆ ನಿಮ್ಮ ಕೈಜೋಡಿಸಿ.
ನಿಮಗೇನಾದರೂ ಗಾಯಗೊಂಡ, ಅನಾಥ, ಬಲವಂತವಾಗಿ ಕೂಡಿಹಾಕಿರುವ ಕಾಡು ಪ್ರಾಣಿಗಳೇನಾದರೂ ಕಂಡು ಬಂದರೆ ಕೂಡಲೇ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಗೆ ತಿಳಿಸಿ. ಸಾಧ್ಯವಾದಷ್ಟು ಧನ ಸಹಾಯ ಮಾಡಿ ಅನಾಥ ಪ್ರಾಣಿಗಳ ಆರೈಕೆಗೆ ನಿಮ್ಮ ಕೈಜೋಡಿಸಿ.
ಫೋನ್ ನಂಬರ್ 9980339880, 9980743201, 9242996015.
1 comment:
ಪ್ರಿಯ ವೆಂಕಟೇಶ್
ನಿಮ್ಮ ಈ ಕೋತಿಗಳ ಚಿತ್ರಗಳನ್ನು ನೋಡಿದರೆ ಕಣ್ಣೀರ ಧಾರೆಯೇ ಹರಿದು ಬರುತ್ತದೆ . ತುಂಬ ಮುದ್ದು ಮುದ್ದಾಗಿರುವ ಕೋತಿ ಪಿಳ್ಳೆಗಳನ್ನು ನೋಡಿದರೆ ಮುದ್ದಿಡುವ ಆಸೆಯಾಗುತ್ತದೆ . ಬೆರಳು ಚೀಪುತ್ತ ಕುಳಿತಿರುವ ಕಂದಮ್ಮಗಳನ್ನು ನೋಡಿ ಮನಸ್ಸು ಜಿಲ್ಲೆಂದಿತು. ಪ್ರಾಣಿಗಳ ಮನಸ್ಸಿನ ಮೂಕ ಮೂಕವೇದನೆಯ ಕಷ್ಟ ಅವಕ್ಕೇ ಗೊತ್ತು . ಚಿತ್ರಗಳಲ್ಲಿನ ನಿಮ್ಮ ವೇದನೆಯು ಮೆಚ್ಚುವಂತಹದು. ಹೀಗೆ ನಮ್ಮ ಪರಿಸರದಲ್ಲಿನ ಪ್ರಾಣಿ ಪಕ್ಷಿಗಳ ಮೂಕ ವೆದನೆಯನೆಯನ್ನು ಅರಿತು ಅವುಗಳಿಗೆ ನಮ್ಮಕೈಲಾದಷ್ಟು ಸೇವೆ ಮಾಡಿದರೆ ಅಷ್ಟೇ ಸಾಕು, ನಾವು ದೇವರಿಗೆ ಪ್ರತ್ಯೇಕವಾಗಿ ಪೂಜೆ ಮಾದುವಷ್ಟಿಲ್ಲ .
ಚಿತ್ರಗಳು ಚೆನ್ನಗಿವೆ. ನಾನು ಕಾಡಿನಲ್ಲಿ ಎರಡು ಕುಟುಂಬಗಳ ಮದ್ಯೆ , ಮರಿಗಳನ್ನು ಮುದಾದುವುದನ್ನು ನೋಡಿದ್ದೇನೆ. ಅವುಗಳ ಕೋತಿ ಚೀಸ್ಟೇ ನೋಡುವುದೇ ಸೊಗಸು . H.Satish
Post a Comment