ನೆನಪಿದೆಯಾ,
ಕೆಲವು ವರ್ಷದ ಹಿಂದೆ ಉತ್ತರ ಭಾರತದ ಒಂದು ಕುಗ್ರಾಮದಲ್ಲಿ, ಹಾಳುಬಿದ್ದಿದ್ದ ಕೊಳವೆ ಬಾವಿಯಲ್ಲಿ, ಆಟ ಆಡುತಿದ್ದ ಒಂದು ಮಗು ಬಿದ್ದಿದ್ದೂ.
ಅದನ್ನು ಜೀವಂತ ರಕ್ಷಿಸಲು ಸೇನಾ ತುಕಡಿ ಆ ಹಳ್ಳಿಯಲ್ಲಿ ಜಮಾಯಿಸಿದ್ದೂ.
ಹಗಲು ರಾತ್ರಿಯೆನ್ನದೆ ಸೇನಾ ಮುಖ್ಯಸ್ಥರೂ, ಪೋಲಿಸರೂ, ರಾಜಕಾರಿಣಿಗಳೂ, ಡಾಕ್ಟರುಗಳೂ, ಎಂಜಿನಿಯರುಗಳೂ, ಊರಿಗೆಊರೇ ಅಲ್ಲಿ ಕ್ಯಾಂಪ್ ಮಾಡಿದ್ದೂ.
ಟೀವೀ ಚಾನಲ್ ನವರು ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಿದ್ದೂ.
ಸಾಮಾನ್ಯ ಪ್ರಜೆಯಿಂದ ಪ್ರಧಾನಿವರೆಗೆ ಇಡೀ ದೇಶವೇ ಟೀವೀ ಮುಂದೆ ಕೂತಿದ್ದೂ. ನೆನಪಾಯಿತಾ..
ಕಾರ್ಗಿಲ್ ಹಾಗು ವಿಶ್ವಕಪ್ ಕ್ರಿಕೆಟ್ ಪೈನಲ್ ಹೊರೆತುಪಡಿಸಿದರೆ ದೇಶ ಎದಿರಿಸಿದ ಅತ್ಯಂತ ಕಾತುರದ ದಿನ ಅದಾಗಿತ್ತು ಅಂದರೆ ತಪ್ಪಾಗಲಾಗದು.ಎಲ್ಲೆಲ್ಲೂ ದುಗುಡ, ಕಾತುರ. ಹೊರಗೆ ಹೋಗಿದ್ದವರು ಮನೆಗೆ ಫೋನಾಯಿಸಿ ಮಗು ಸ್ಥಿತಿ ಏನು, ಜೀವಕ್ಕೆ ಏನೂ ಆಗಿಲ್ಲಾ ತಾನೇ,ಪೈಪಿನ ಮೂಲಕ ಕೊಡುತಿದ್ದ ಆಹಾರ, ನೀರು ಕುಡಿಯುತ್ತಿದೆ ತಾನೇ. ಹೀಗೆ ಹಲವಾರು ಪ್ರಶ್ನೆಗಳು.ದೇವರಲ್ಲಿ ಮೊರೆ. ಉತ್ತರಕ್ಕಾಗಿ ಕೆಲವು ಗಂಟೆಗಳೇ ಕಾಯಬೇಕಾಗಿತ್ತು .

ಹಲವು ಗಂಟೆಗಳ ಹರ ಸಾಹಸದಿಂದ ಮಗು ಇದ್ದ ಕೊಳವೆ ಬಾವಿ ಪಕ್ಕದಲ್ಲೇ ಅದರ ಸಮನಾಗಿ ಬಾರಿ ಕಂದಕ ತೋಡಿ ಮಗುವನ್ನು ಸುರಕ್ಷಿತವಾಗಿ ತೆಗೆದು ಸೇನಾ ಡಾಕ್ಟರುಗಳ ಕೈಯಲ್ಲಿಟ್ಟಾಗ ಎಲ್ಲರಿಗೂ ನಿಟ್ಟಿಸುರು. ಸಂಭ್ರಮ.
ಅದಾದ ನಂತರ ಅದೇ ತರಹ ಹಲವಾರು ಮಕ್ಕಳು ಬೇರೆಬೇರೆ ಕಡೆ ಕೊಳವೆಬಾವಿಗೆ ಬಿದ್ದಿದ್ದಾರೆ, ಕೆಲವು ಮಕ್ಕಳು ಬದುಕಿಬಂದಿದ್ದಾರೆ ಕೆಲವರು ಸತ್ತಿದ್ದಾರೆ ಅದು ವ್ಯವಸ್ಥೆಗೆ ಹಿಡಿದ ಕನ್ನಡಿ.
ಇರಲಿ ವಿಷಯಕ್ಕೆ ಬರೋಣ, ನಮ್ಮನೆ ನಾಯಿ ಅದರ ಹೆಸರು ಜಾನಿ, ಮನೆಮುಂದೆ ಹಾಸಿರುವ ಚಪ್ಪಡಿ ಕಲ್ಲಿನ ಸಂದಿಯಲ್ಲಿ ಮೂಸಿನೋಡುವುದು ಪರಪರ ಕೆರೆಯುವುದನ್ನು ನೋಡಿ, ಅದನ್ನು ಗದರಿಸಿ ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಹಲ್ಲಿಯ ಕಾಲಿನಂತೆ ಕಂಡುಬಂತು, ಮೇಲಿದ್ದ ಸಿಮೆಂಟ್ ಮೆಲ್ಲಗೆ ಕಿತ್ತಾಗ ಕಂಡಿದ್ದು ಕೀಚ್ ಕೀಚ್ ಶಭ್ದ ಮಾಡುತ್ತಿದ್ದ ಒಂದು ಇಲಿಮರಿ, ಕಣ್ಣೂ ಬಿಡದ ಕಂದಮ್ಮ ಕಲ್ಲಿನ ಸಂಧಿಯಿಂದ ಮೇಲೆ ಬರುವ ಸಾಹಸ ಮಾಡುತ್ತಿತ್ತು. ತಲೆ ಸಿಕ್ಕಿಹಾಕಿಕೊಂಡಿತ್ತು. ಮರಿಯ ಕೆಳಬಾಗದಲ್ಲಿದ್ದ ಮಣ್ಣನ್ನು ಸಡಿಲ ಗೊಳಿಸಿ ಹೊರತೆಗೆದು, ಸುಮಾರು ಮೂವತ್ತೈದು ನಿಮಿಷದ ಕಾರ್ಯಾಚರಣೆ ನಂತರ ಮರಿಯ ತಲೆ ಭಾಗದಿಂದ ಮೆಲ್ಲಗೆ ತಳ್ಳಿ ಸ್ಪೂನ್ ನಿಂದ ಹೊರತೆಗೆದೆ . ಮಗುವನ್ನು ಕೊಳವೆ ಬಾವಿಯಿಂದ ತೆಗೆದಾಗ ಆದ ಸಂತೋಷ, ಸಂಭ್ರಮ. ಇರುವೆಯಾದರೇನು, ಆನೆಯಾದರೇನು ಜೀವ ಜೀವವೇ ... ಅಲ್ಲವೇ …
ಜಾನ್ ಸನ್ಸ್ ಬಡ್ಸ್ ನಿಂದ ಹಾಲು ಕುಡಿಸಿ ಒಂದು ಡಬ್ಬಿಯಲ್ಲಿ ಹತ್ತಿಯ ಹಾಸಿಗೆ ಮಾಡಿ ಮಲಗಿಸಿದೆ.
ಮರಿಯನ್ನು ಅದರ ಅಮ್ಮನಿಗೆ ಒಪ್ಪಿಸುವುದು ಹೇಗೆ, ಹಗಲು ಇಲಿಗಳ ಓಡಾಟ ಕಮ್ಮಿ ಅದಕ್ಕಾಗಿ ರಾತ್ರಿ ವರೆಗೆ ಕಾಯಬೇಕಾಗಿತ್ತು. ಅದರಮ್ಮಇದೆಯೋ ಇಲ್ಲವೋ ತಿಳಿಯುವುದು ಹೇಗೆ, ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಇಲಿಯ ಬಿಲದ ಬಳಿ ಹುರಿಗಡಲೆ ಹಾಗಿದ್ದೆ. ಅರ್ಧ ಗಂಟೆ ಬಿಟ್ಟು ನೋಡಿದಾಗ ಹುರಿಗಡಲೆ ನಾಪತ್ತೆ. ಸುಮಾರು ಹತ್ತುಗಂಟೆಗೆ ಶಿರಡಿ ಬಾಬಾ ಮಂದಿರದ ವಿಭೂತಿ ಮರಿಯ ಹಣೆಗೆ ಹಚ್ಚಿ ದೇವರಮೇಲೆ ಭಾರ ಹಾಕಿ ಬಿಲದೊಳಕ್ಕೆಬಿಟ್ಟೆ, ಹತ್ತೇ ಸೆಕೆಂಡು. ಪಟಾಕಿ ಅಂಗಡಿಯಮುಂದೆ ಬೆರಗುಗಣ್ಣಿನಿಂದ ನೋಡುತ್ತಾ ನಿಂತಿದ್ದ ಮಗನನ್ನು ಅವನಪ್ಪ ದರದರನೆ ಎಳೆದುಕೊಂಡು ಹೋಗುವಂತೆ ಅಂಗಾತ ಮಲಗಿದ್ದ ಮರಿಯನ್ನು ಅದರಮ್ಮ ಎಳೆದುಕೊಂಡು ಹೋಯಿತು. ಮನಸೆಲ್ಲಾ ಹಸಿಹಸಿ ಏನೋ ನೆಮ್ಮದಿ, ನಿರಾಳವಾಗಿ ನಿದ್ರೆ ಮಾಡಿದೆ. ಈಗಲೂ ಅದರ ಕೀಚ್ ಕೀಚ್ ಶಭ್ದ ಕಿವಿಯಲ್ಲಿ ಗೂಯ್ ಗುಟ್ಟುತ್ತಿದೆ.
ಕಾರ್ಯಾಚರಣೆಯ ಕೆಲವು ಫೋಟೋಗಳು .
ಈ ಕಲ್ಲು ಸಂದಿಯ ಸಿಮೆಂಟ್ ಕೆಳಗೆ ಮರಿ ಇದ್ದದ್ದು.
ಕಾರ್ಯಾಚರಣೆಗೆ ಬಳಸಿದ ಸ್ಪೂನ್ (ಅಲ್ಲ ಜೆ ಸಿ ಬಿ) ನಲ್ಲಿ ಮರಿ .
ಬೆಳಗ್ಗೆ ಇಂದ ಹೊಟ್ಟೆಗೆ ಏನು ಇರಲಿಲ್ಲ ಒಂದು ಗುಟುಕು ಹಾಲು ಕುಡಿದ ಮೇಲೆ ಈಗ ಸಮಾದಾನ .
ಮರಿ ಹೊರ ತೆಗೆದ ಜಾಗ
ಹತ್ತಿ ಹಾಸಿಗೆಮೇಲೆ ರಿಲಾಕ್ಸ್. ಸ್ವಲ್ಪಹೊತ್ತು ಮಾತ್ರ.
ವಿಡಿಯೋ ನೋಡಿ . ಇದಾವುದೋ ಹತ್ತಿ ಹಾಕಿ ಮಲಗಿಸಿದ್ದಾನೆ,ನಿದ್ರೆ ಬರ್ತಾ ಇಲ್ಲ.
ಅಮ್ಮ ಇದೇ ತರಹ ಪೇಪರ್ ಚೂರಿನಲ್ಲಿ ಹಾಸಿಗೆ ಮಾಡಿದ್ಲು.
ಅಮ್ಮನ ಮಡಿಲು ಸೇರೋವರೆಗೂ ಈ ಬೆಚ್ಚಗಿರೋ ಇಂಟರ್ನೆಟ್ ಮೋಡಂ ಮೇಲೆ ಮಲಗಿರ್ತೀನಿ .
6 comments:
thumba olleya kelasa maadiddeera.. ili mari bahala chennagide..
rakshana kaarya , mundu variyali... :)
-- ಚೆನ್ನಾಗಿದೆ ! ನಿಮಗಿರುವ ಪ್ರಾಣಿ ದಯೆ ನಾವು ಮೆಚ್ಚಲೇಬೇಕು . ಆದರೆ ಈಗಿರುವ ಇಲಿ ಸಂತತಿ ಹೆಚ್ಚಾಗಿರುವ ಕಾರಣ ನೀವೇ ಎಂದು ತಿಳೀತು .
Live and let live
ಸತೀಶ್
pranigal mele nimagiruv kalajige namma kadeyinda hat"s of.
Pranigal bagge nimagiruva kalajige nanna kadeyinda ananta vandanegalu.
Hi Venkatesh Murthy, Very very nice photos about the squirrel and pl keep sending
Hi,Venki ur caring towards animals is appriciable thing and i like ur attidue very much. keep it up and keep sending
Post a Comment