Saturday, July 02, 2011

ಬಳ್ಳಾರಿ ಆಚೆ ಒಂದ್ ಮದ್ವೆ

ಆರಾಮಿದ್ದೀರಲ್ಲಾ,


    ದೊಡ್ಡನ ಗೌಡ. (ಗೌಡರಲ್ಲ ವೀರಶೈವರು)  ನನ್ನ ಹೆಂಡತಿಯ ಸಹೋದ್ಯೋಗಿ ಅವರ ಮದುವೆ ಸಿರಿಗೆರೆಯಲ್ಲಿ. ಬಳ್ಳಾರಿಯಿಂದ  ಸಿರುಗುಪ್ಪ ರಸ್ತೆಯಲ್ಲಿ ಮೂವತ್ತೆರಡು ಕಿಲೋ ಮೀಟರ್ ಕ್ರಮಿಸಿ ಸಿರಿಗೆರೆ ಕ್ರಾಸ್ ನಲ್ಲಿ  ಎಡಕ್ಕೆ ಎಂಟು ಕಿಮೀ ರಸ್ತೆ ಸವೆದರೆ ಸಿಗುವುದೇ ಸಿರಿಗೆರೆ. ಮದುವೆಗೆ ಬೆಂಗಳೂರಿನಿಂದ ಹೊರಟಿದ್ದು ನಾನು ನನ್ನ ಹೆಂಡತಿ,ಅವಳ ಸಹೋದ್ಯೋಗಿ, ಅವರ ಪತಿ ಮತ್ತು ಮಗ.

    ದೊಡ್ಡನ ಗೌಡ ಕೊನೇ ಮಗನಾಗಿದ್ದರಿಂದ ಅವರ ಮನೆಯಲ್ಲೇ ಮದುವೆ.ಈ ಭಾಗದಲ್ಲಿ ಹೆಚ್ಚಾಗಿ ಮೊದಲ ಮಗ ಅಥವಾ ಕೊನೇ ಮಗನಿಗೆ ಅವರು ವಾಸಿಸುವ ಮನೆಯಲ್ಲೇ ಮದುವೆ ಶಾಸ್ತ್ರ ಮಾಡಿಕೊಡುವುದು ಸಂಪ್ರದಾಯ. ಗಂಡಿನ ಮನೆ-ಯವರು ಹೆಣ್ಣು ತರುವ ಮನೆಯಲ್ಲಿ ಹೋಳಿಗೆ ಊಟ ಮಾಡಿದರೆಂದರೆ ಸಂಭಂದ ಗಟ್ಟಿಯಾದಂತೆ. ಮನೇದೇವರಿಗೆ ಫಲ ಅರ್ಪಿಸುವ ಮೂಲಕ ಅಧೀಕೃತವಾಗಿ ಮದುವೆ ಶಾಸ್ತ್ರಕ್ಕೆ ಚಾಲನೆ.

    ದೇವತಾಕಾರ್ಯದ ಮುನ್ನಾದಿನ ಸ್ವಾಮಿಗಳನ್ನು ಕರೆಸಿ ಲಗ್ನಕಟ್ಟಿಸುತ್ತಾರೆ ಲಗ್ನಪತ್ರಿಕೆಯ ಎರಡು ಪ್ರತಿಗಳಿಗೆ ಪೂಜೆ ಮಾಡುತ್ತಾರೆ ಊರವರ ಸಮಕ್ಷಮದಲ್ಲಿ ಮದುವೆ ಶಾಸ್ತ್ರ ಶುರುವಾಯಿತೆಂದು ಘೋಷಿಸುತ್ತಾರೆ. ಹೆಣ್ಣಿನ ಮನೆಗೆ ಲಗ್ನದಕ್ಕಿ  ಕೊಡಲು ಒಂದಿಬ್ಬರನ್ನು ಕಳಿಸುತ್ತಾರೆ ಅದರಲ್ಲಿ ಲಗ್ನಪತ್ರಿಕೆಯ ಪ್ರತಿ, ಅಕ್ಕಿ,ಬೆಲ್ಲ, ಕಾಯಿ,ಕೊಬ್ಬರಿ,ಇರುತ್ತದೆ.



     ಅಂದು ಸಂಜೆ ಕುಂಬಾರರ ಮನೆಗೆ ಹೋಗಿ ಪೂಜೆ ಮಾಡಿ ಗಡಿಗೆಗಳನ್ನು  ತರುತ್ತಾರೆ.ಮರುದಿನ ಮನೆ ಮುಂದೆ ಚಪ್ಪರ ಹಾಕಿಸುತ್ತಾರೆ, ಶಬ್ದಮೇಳದೊಂದಿಗೆ. ಇಲ್ಲಿನ ಹಾಗೆ ನಾದಸ್ವರ ಅಲ್ಲ ಬ್ಯಾಂಡ್ ಸೆಟ್. ಹುಡುಗನ  ಕೈಯಲ್ಲಿ ಚಪ್ಪರಕ್ಕೆ ಪೂಜೆ ಮಾಡಿಸುತ್ತಾರೆ.ಮಕ್ಕಳನ್ನು ಚಪ್ಪರದ ಕೆಳಗೆ ಕೂಡಿಸಿ ಪೂಜೆಗೆ ಇಟ್ಟಿದ್ದ ಪ್ರಸಾದವನ್ನು ಅಲ್ಲೇ ತಿನ್ನಲು ಕೊಡುತ್ತಾರೆ.


   ನಂತರ ಚಟ್ ಬಡಿಯೋದು, ಅಂದರೆ ಹುಡುಗನ ಭಾವ ಒಂದು ಪಾತ್ರೆಯಲ್ಲಿ


ಕೆಮ್ಮಣ್ಣನ್ನು ತೆಳ್ಳಗೆ ಕಲಿಸಿ ಹಿಡಿದುಕೊಂಡಿರುತ್ತಾರೆ ಅಕ್ಕ ಎರಡು ಕೈ ಅದರಲ್ಲಿ ಅದ್ದಿ ಮನೆ ಸುತ್ತಲ ಗೋಡೆಯ ಮೇಲೆ ಅಂಗೈನಲ್ಲಿ ಮುದ್ರೆ ಹಾಕುತ್ತಾರೆ. ನಂತರ ಅಕ್ಕ ಭಾವನ್ನ ಮಣೆಮೇಲೆ ಕೂಡಿಸಿ ಮಂಗಳ ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಟ್ಟು ಹಾರ ಹಾಕಿ ಸತ್ಕರಿಸಿ ಆರತಿ ಮಾಡುತ್ತಾರೆ.

    ಹುಡುಗನ ಜೊತೆ  ಆತನ ಸೋದರ ಸೊಸೆಯನ್ನು  ಕೂಡಿಸಿ ಅರಿಶಿನ ಹಚ್ಚುವ ಶಾಸ್ತ್ರ. ಚಟ್ ಬಡಿಯೋದು, ಅರಿಶಿನದ ನೀರು ಮೈಮೇಲೆ ಬೀಳೋದು ಅಂದ್ರೆ ಅಧೀಕೃತವಾಗಿ ಹುಡುಗ ಮದುಮಗನಾಗುತ್ತಾನೆ. ಅಲ್ಲಿಂದಾಚೆ ಸ್ವಾಮಿಗಳ ಸಮ್ಮುಖದಲ್ಲಿ ಊರಲ್ಲಿ ಮದುವೆಗೆ ಕರೆಯಲು ಹೋಗುತ್ತಾರೆ.

ಸಂಜೆ ಹೆಣ್ಣಿನ ಮನೆಯವರ ಆಗಮನ. ತಂಗಲು ವ್ಯವಸ್ಥೆ ಮಾಡಿರುವ ಸ್ಥಳಕ್ಕೆ ವಾದ್ಯಮೇಳದೊಂದಿಗೆ, ಬಾಣಬಿರುಸುಗಳೊಂದಿಗೆ ಕರೆತರುತ್ತಾರೆ. ತಿಂಡಿಗೆ ಊಟಕ್ಕೆ ಕರೆತರುವಾಗಲೂ ವಾದ್ಯಮೇಳ . ರಾತ್ರಿ ಸ್ವಲ್ಪ ಇಲ್ಲಿನಹಾಗೆ ಫಲತಾಂಬೂಲ  ಹಾರ ಉಂಗುರ ವಸ್ತ್ರ ವಿನಿಮಯ, ಮಿಕ್ಕ ಶಾಸ್ತ್ರಗಳು.

. 



  



  



  

 ಮದುವೆಯ ದಿನ ಮದುಮಗಳನ್ನು ಮನೆಗೆ ಕರೆತಂದು ಇಬ್ಬರಿಗೂ ಅರಿಶಿನ ಹಚ್ಚುವ ಶಾಸ್ತ್ರ,ಮಂಗಳಸ್ನಾನ.  ಇಬ್ಬರನ್ನು ಅಲಂಕರಿಸಿ ಮದುವೆಗಾಗಿಯೇ ಚಿತ್ರಬಿಡಿಸಿದ ಗೋಡೆಯ ಮುಂದೆ ಕಂಬಳಿ ಹಾಸಿ ಸಿದ್ದಪಡಿಸಿದ ಹಸೆಮಣೆ ಮೇಲೆ ಕೂರಿಸಿ ದಾರೆಯೆರೆಯುವುದು, ಮಾಂಗಲ್ಯಧಾರಣೆ ಮುಂತಾದ ಶಾಸ್ತ್ರಗಳು.  ಮುಂದಿನ ಕಾರ್ಯಕ್ರಮ ಆರತಕ್ಷತೆ.
    




 



 







 



 





 








 



 



 

   
    ಮದುವೆಯಾದ ಮೂರು ದಿನದ ನಂತರ ಮದುವೆ ಮಾಡಿಕೊಟ್ಟವರ ಮನೆಯಲ್ಲಿ ಹೊಸನೀರು ಅಂತ ಮತ್ತೆ ಆರತಕ್ಷತೆ ಬುಧವಾರ ಅಥವಾ ಶನಿವಾರ, ಮದುವೆಗೆ ಬರಲಾಗದೇ ಇದ್ದವರಿಗಾಗಿ.  ಬುಧವಾರ ಗಂಡಿನ ಮನೆಯಲ್ಲಾದರೆ ಶನಿವಾರ ಹೆಣ್ಣಿನ ಮನೆಯಲ್ಲಿ.



    ಹೆಸರು ಬಲದಮೇಲೆ ಒಂಬತ್ತನೇ,ಹನ್ನೊಂದನೇ ಅಥವಾ ಹದಿನಾರನೇ ದಿನ ಗಂಗಾಪೂಜೆ, ಬಾವಿಯಲ್ಲಿ ಗಂಗೆಯ ಪೂಜೆ ಮಾಡಿ ಮೊಳಕೆ ಬರಿಸಿದ್ದ   ಧಾನ್ಯವನ್ನು , ವದೂವರರಿಗೆ ಕಟ್ಟಿದ್ದ ಬಾಸಿಂಗವನ್ನು ಗಂಗೆಯಲ್ಲಿ ವಿಸರ್ಜಿಸಿ ಮದುವೆಗೆ ತಂದಿದ್ದ ಗಡಿಗೆಗಳಿಂದ ನೀರನ್ನು ಮನೆಗೆ ತರುತ್ತಾರೆ ಅಲ್ಲಿಗೆ ಸಂಪ್ರದಾಯದಂತೆ ಮದುವೇ ಶಾಸ್ತ್ರಗಳು ಮುಗಿದಂತೆ.


    ಆ ದಿನ ಅಥವಾ ಎರಡು ದಿನ ಬಿಟ್ಟು ಹೆಣ್ಣಿನ ಮನೆಯಲ್ಲಿ ಕೊನೆಯ ಕಾರ್ಯಕ್ರಮ  'ಮೊದಲ ರಾತ್ರಿ'.  ಮತ್ತೆರಡು ದಿನ ಬಿಟ್ಟು ಗಂಡಿನ ಮನೆಗೆ ಬಂದಮೇಲೆ ಹೊಸಜೀವನ ಪ್ರಾರಂಭ.



    ಮದುವೆ ಮಾಡಿದ್ದು ಮನೆಯಲ್ಲಾದರೆ ಆರತಕ್ಷತೆ ಊರಮುಂದೆ, ಅಡುಗೆಗೆ ತಯಾರಿ ಒಂದು ಮನೆ ಮುಂದಿನ ಜಗುಲಿಯ ಮೇಲಾದರೆ,




  ಅಡುಗೆ ಮಾಡಿದ್ದು ಇನ್ನಾರದೋ ಮನೆ ಹತ್ತಿರ ಕಾಲಿಜಾಗದಲ್ಲಿ





ಊಟ ಬಡಿಸಿದ್ದು ಸ್ವಲ್ಪ ದೂರದಲ್ಲಿದ್ದ ಇವರದೇ ಖಾಲಿ ಸೈಟಿನಲ್ಲಿ.




ಅಡುಗೆ ತಯಾರಿಯಿಂದ ಎಲೆಹಾಕಿ ಬಡಿಸುವವರೆಗೂ ಎಲ್ಲಾ ಕೆಲಸವನ್ನು ಮುನ್ನುಗ್ಗಿ ಮಾಡಿದ್ದು ಮನೆ ಅಕ್ಕಪಕ್ಕದವರು ಬಂಧುಬಳಗದವರು. ಇದೊಂದು ಬಗೆಯ ವಿಶೇಷ ವಿಶಿಷ್ಟ ಅನುಭವ. 
 
ಮೆನು
ಮದುವೆಯ ಹಿಂದಿನ ದಿನ
ಪೂರಿ, ಮಾವಿನಹಣ್ಣಿನ ಸೀಕರಣೆ,ಆಲೂಗೆಡ್ಡೆ ಪಲ್ಯ, ಉಪ್ಪಿನಕಾಯಿ,ಚಟ್ನಿ(ಈರುಳ್ಳಿ,ಹಸಿಮೆಣಸು,ಕೊತ್ತಂಬರಿ,ಹಸಿಟೊಮೇಟೊ ಹಾಕಿ ಕಲ್ಲಿನ ಮೇಲೆ ಅರೆದದ್ದು. ಅರೆಯುವ ಕಲ್ಲಿನ ಚಿತ್ರ ಕೊನೆಯಲ್ಲಿದೆ). ಅನ್ನ ತರಕಾರಿ ಸಾಂಬಾರ್,ತಿಳೀಸಾರು.


ಮದುವೆಯ ದಿನ ಬೆಳಗ್ಗೆ ತಿಂಡಿಗೆ.
ತರಕಾರಿ ಉಪ್ಪಿಟ್ಟು,ಚಟ್ನಿಪುಡಿ,ದಪ್ಪರವೆಯ ಕೇಸರಿಬಾತು.

ಅದೇದಿನ ಮಧ್ಯಾಹ್ನ ಊಟಕ್ಕೆ
ಕಾಯಿ ಹೋಳಿಗೆ ಮನೇಲಿ ಕಾಯಿಸಿದ ತುಪ್ಪ,ಈರುಳ್ಳಿ ಬೆಳ್ಳುಳ್ಳಿ ಹಾಕಿ ಮಾಡಿದ್ದ ಚಿತ್ರಾನ್ನ, ಕೋಸಂಬರಿ,ಪಲ್ಯಗಳು, ಚಟ್ನಿ,ಚಟ್ನಿಪುಡಿ,ಉಪ್ಪಿನಕಾಯಿ, ಅನ್ನ,  ಸೊಪ್ಪು ತರಕಾರಿ ನುಗ್ಗೆಕಾಯಿ ಹಾಕಿ ಮಾಡಿದ್ದ ಸಾಂಬಾರ್ ,ತಿಳೀ ಸಾರು, ಚುಮಚುಮ ಕಾರದ ಮಸಾಲೆ ಮಜ್ಜಿಗೆ.







ಹಳ್ಳಿಯಲ್ಲೊಂದು ಸುತ್ತು































ಈ ಗುಂಡ್ಕಲ್ಲು ಏನ್ ಗೊತ್ತಾ ಮಸಾಲೆ ಕಾರ ಅರಿಯೋ ಕಲ್ಲು.ಮೇಲೊಂದು ಗೂಟಹಾಕಿ ಹಿಂದೆ ಮುಂದೆ ಆಡಿಸಿದರೆ ಆಯಿತು. ಇಲ್ಲಿರೋದು ಹಳೇದು ಉಪಯೋಗಿಸದೆ ಇರೋದು ನಮ್ಮಲ್ಲಿರೋ ತರ ಒರಳುಕಲ್ಲು ಅಲ್ಲಿಲ್ಲ.  ಎಲ್ಲಕಡೆ ಇದೇ ಸೈಜ್ ಕಲ್ಲೇ.


ನೂತನ ದಂಪತಿಗಳಿಗೆ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ


-ಕ. ಶ್ರೀ. ವೆಂಕಟೇಶ ಮೂರ್ತಿ.

5 comments:

Unknown said...

tumbaa chennagiththu maduve nota, naane maduveli bhagavarisiddnagaithri

mahesh kumar said...

bahalaa chennagittu photographs.. nimma photone.. illavalla maduveyalli... all the best Nextaadru neevu banni photogalalli
yours
mahesh

VishalRakesh said...

indhina aadhunikatheya vegadha dinagalalli, nijavagiyu ondhu vishishta reethiya madhuve.

Sateesh said...

Nice Presentation, Sir Salute you ....
Nava Vadu-Vararige Shuba Haraikegalu.

vijayaprasadGowdaks said...

Badalaagda ade SIRIGERE aadare badalaadaddu maatra JEEVANA ! Maduvege naanu koneya kshanadalli tappisikonde, Doddanagoudanige kopa bandide ! Aadare Maduve yalli iddaste, nodidaste santhosh aagide venkatesh murthy avara sachitra savivara manassige muda needide. Nimage saavira pranamagalu. Haageye DODDANAGOUDA+NANDINI--NAVA DAMPATHIGALIGE nurkaala deerghayushigalaagali yendu haraisutta-koneyalli Gouda vs Gowda clarification yaake???vijayaprasadksGowda,Kyathanahally,Mandya-571427

Total Pageviews