ಕಳ್ಳೇಕಾಯ್....ಕಳ್ಳೇಕಾಯ್....
ಆಫೀಸಿನಿಂದ ಬರಲು ತಡವಾಯಿತು, ಊರಲ್ಲಿರಲಿಲ್ಲ, ಮೈಸರಿಯಿರಲಿಲ್ಲ, ಎಂದು ಕಡಲೆಕಾಯಿ ಪರಿಷೆ ಮಿಸ್ ಮಾಡಿಕೊಂಡವರಿಗಾಗಿ ಮಾತ್ರ.
(ನೆನಪೇ ಇರಲಿಲ್ಲ, ಆ ರಶ್ ನಲ್ಲಿ ಯಾವೋನ್ ಹೋಗ್ತಾನೆ ಎಂದವರ ಹೊರೆತು ಪಡಿಸಿ).
ಬೆಂಗಳೂರಿನಲ್ಲಿ ಕರಗ ಎಷ್ಟು ಪ್ರಖ್ಯಾತಿಯೋ, ದೊಡ್ಡ ಬಸವಣ್ಣನ ಗುಡಿಯ ಕಡಲೆಕಾಯಿ ಪರಿಷೆಯೂ ಅಷ್ಟೇ ಪ್ರಖ್ಯಾತ. ಜನ ರಾಕೆಟ್ ಯುಗದಲ್ಲಿದ್ದರೂ ಎಲ್ಲೋ ಅಲ್ಪ ಸ್ವಲ್ಪ ಧಾರ್ಮಿಕ ಭಾವನೆಗಳು ಇನ್ನೂ ಜೀವಂತವಾಗಿದೆ. ಅದಕ್ಕೆ ಈಗಲೂ ನಡೆಯುತ್ತಿರುವ ಪರಿಷೆಗಳೂ, ಕರಗಗಳೂ, ಜಾತ್ರೆಗಳೂ, ರಥೋತ್ಸವಗಳೂ, ಹಬ್ಬಹರಿದಿನಗಳೇ ಸಾಕ್ಷಿ.
ಬೆಂಗಳೂರು ಬಸವನಗುಡಿಯಲ್ಲಿ ಕಡಲೆಕಾಯಿ ಹೆಸರಲ್ಲಿ ಪರಿಷೆ ನಡೆಯುತ್ತದೆ.
ಕಾರ್ತೀಕ ಮಾಸದ ಕೊನೆಯ ಸೋಮವಾರ ಹಾಗೂ ಮಂಗಳವಾರಗಳಂದು ಬೆಂಗಳೂರು ಬಸವನಗುಡಿಯ ತುಂಬಾ ಕಡಲೆಕಾಯಿಗಳದೇ ಸಾಮ್ರಾಜ್ಯ. ಇಲ್ಲಿ ಜನಜಾತ್ರೆ, ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಂದ
ಬರುವ ಜನ, ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಂಡು ಖುಷಿಪಡುತ್ತಾರೆ.
ಬರುವ ಜನ, ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಂಡು ಖುಷಿಪಡುತ್ತಾರೆ.
ಕಡಲೆಕಾಯಿ ಪರಷೆ ಹೇಗೆ ಶುರು ಆಯಿತು, ಕತೆ ಹೇಳ್ತೀನಿ ಕೇಳಿ.
ಹಾರ್ಟ್ ಆಫ್ ದಿ ಸಿಟಿ ಬಸವನಗುಡಿ. ಸುಂಕೇನ ಹಳ್ಳಿ ಹಿಂದಿನ ಹೆಸರು . ಡಿ. ವಿ. ಜಿ. ಅವರು ಹುಟ್ಟಿಬೆಳೆದ ಸ್ಥಳ. ಈ ಪ್ರಸಿದ್ಧ ಪ್ರದೇಶದಲ್ಲಿರುವುದೇ ಬಸವಣ್ಣನ ದೇವಸ್ಥಾನ. ಇಲ್ಲಿ ಹೊಲಗದ್ದೆಗಳಿದ್ದವು. ರೈತರು ತಮ್ಮ ಹೊಲದಲ್ಲಿ ಕಡಲೆಕಾಯಿ ಬೆಳೆಯುತ್ತಿದ್ದರು. ಕಡಲೆಕಾಯಿ ಫಸಲು ಬರುವ ಕಾರ್ತೀಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ ಕಣದ ಪೂಜೆ ಮಾಡುತ್ತಿದ್ದರು.
ಒಮ್ಮೆ ಹೀಗೆ ಕಣ ಮಾಡಿದ್ದ ಸಮಯದಲ್ಲಿ ಗೂಳಿಯೊಂದು ಬಂದು ಕಡಲೆಕಾಯಿ ತಿಂದು ಹೋಗಿತ್ತಂತೆ.
ಒಮ್ಮೆ ಹೀಗೆ ಕಣ ಮಾಡಿದ್ದ ಸಮಯದಲ್ಲಿ ಗೂಳಿಯೊಂದು ಬಂದು ಕಡಲೆಕಾಯಿ ತಿಂದು ಹೋಗಿತ್ತಂತೆ.
ಗೂಳಿಯ ಕಾಟ ತಾಳಲಾರದೆ ರೈತರು ರಾತ್ರಿ ಅವನನ್ನು ಹೊಡೆಯಲು ಕಾದಿದ್ದರಂತೆ. ನಿರೀಕ್ಷೆಯಂತೆ ಅವನು ಬಂದು ಕಡಲೆಕಾಯಿ ತಿಂದ. ರೈತರು ಅವನನ್ನು ಅಟ್ಟಿಸಿಕೊಂಡು ಹೋದರಂತೆ ಆಗ ರೈತರ ಹೊಡೆತ ತಪ್ಪಿಸಿಕೊಳ್ಳಲೆಂದು ಅವನು ಈಗ ಗುಡಿ ಇರುವ ಸ್ಥಳದಲ್ಲಿ ಬಂದು ಕಲ್ಲಾದನಂತೆ . ಇದನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ, ಶಿವನ ವಾಹನ ನಂದಿ ಎಂದು ತಿಳಿದು, ಮಾಡಿದ ತಪ್ಪಿಗಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ತಕ್ಷಣ ತಮ್ಮ ಮೊದಲ ಬೆಳೆಯನ್ನು ಈ ಬಸವಣ್ಣನಿಗೆ ನೇವೇದ್ಯ ಮಾಡಿ, ನಂತರ ಮಾರಾಟ ಮಾಡುತ್ತಿದ್ದರಂತೆ. ಇಂದಿಗೂ ಈ ಪರಂಪರೆ ನಡೆದುಕೊಂಡು ಬಂದಿದೆ.
ಈ ಜಾತ್ರೆಗೆ ಬರುವ ಭಕ್ತರು ಕಡಲೆಕಾಯಿ ತಿಂದರೆ, ಬಸವ ತೃಪ್ತನಾಗುತ್ತಾನೆಂಬುದು ಹಲವರ ನಂಬಿಕೆ. ಭಕ್ತರು ತಿಂದು ಎಸೆದ ಸಿಪ್ಪೆಯನ್ನು ರಾತ್ರಿಯ ವೇಳೆ ಕಲ್ಲು ಬಸವ ನಿಜರೂಪ ದಲ್ಲಿ ಬಂದು ತಿನ್ನುತ್ತಾನೆ ಎಂದು ಜನರ ನಂಬಿಕೆ.
೧೫೩೭ (1537) ರಲ್ಲಿ ಮಾಗಡಿ ಕೆಂಪೇಗೌಡರು ಈ ಬಸವಣ್ಣನಿಗೆ ದೇವಾಲಯ ಕಟ್ಟಿಸಿದರು ಎಂದು ಶಿಲಾಶಾಸನದಲ್ಲಿ ಉಲ್ಲೇಖವಿದೆ. ಆ ಕಾಲದಲ್ಲಿ ಇಲ್ಲಿ ವೃಷಭಾವತಿ ನದಿ ಹರಿಯುತ್ತಿತ್ತಂತೆ. ನದಿ ನೋಡಿದವರು, ನದಿಯಲ್ಲಿ ಈಜಾಡಿದವರು, ಆ ನದಿಯ ನೀರು ಕುಡಿದವರೇ ಭಾಗ್ಯವಂತರು.
ಒಟ್ಟೂ ಪರಷೆ ಗಲಾಟೆಯ ಅರ್ಧದಷ್ಟು ಶಭ್ದ ಈ ಪೀಪೀ ದು
2 comments:
Very good coverage of parishe. I have not visisted this year. Thanks for Live ! ! ! Parishe
Parishe...
What is bean said hear may be a myth or may be not....
Who knows???
All in gods name people who come hear pile up tons of garbage and make the place stink.
The temple sanctity has to be maintained and a well organized volunteers people have to be deployed as to make the smooth functionalism of the event henceforth.
Only then U find the event successful.
Truly the photographs is splendid and awesome no doubt about it, keep up the good work...
Till then
ALL IS WELL!!!!!
Post a Comment